ಗಬ್ಬರ್ ಸಿಂಗ್ – ಪೈಲ್ವಾನ್ ಮಧ್ಯೆ ಅಹಂ ಯುದ್ಧ..!
ಬೆಂಗಳೂರು : ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ತೆಲುಗಿನ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಸಿನಿ ಅಂಗಳದಲ್ಲಿ ಸದ್ದು ಮಾಡುತ್ತಿದೆ.
ಅದರಲ್ಲೂ ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ( Pawan Kalyan ) ರ ಮುಂದಿನ ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಕೀಯದಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಪವನ್ ಕಲ್ಯಾಣ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಖ್ಯಾತ ಗಾಯಕ ವಿಜಯ್ ಏಸುದಾಸ್ ಕಾರಿಗೆ ಅಪಘಾತ
ಅದರಂತೆ ಮಲಯಾಳಂನಲ್ಲಿ ಹೆಚ್ಚು ಪ್ರಶಂಸೆ ಪಡೆದಿರುವ ‘ಅಯ್ಯಪ್ಪನುಂ ಕೊಶಿಯಮ್’ ತೆಲುಗು ರಿಮೇಕ್ ನಲ್ಲಿ ಪವನ್ ಕಲ್ಯಾಣ್ ಅಭಿನಯಿಸುತ್ತಿದ್ದಾರೆ.
ಈ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿಲ್ಲವಾದರೂ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ.
ಈ ಚಿತ್ರವನ್ನು ಸಾಗರ್ ಕೆ ಚಂದ್ರ ನಿರ್ದೇಶಿಸುತ್ತಿದ್ದು, ಸಿತಾರಾ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿ ಎಸ್.ನಾಗವಂಶಿ ಸಿನಿಮಾ ನಿರ್ಮಿಸುತ್ತಿದ್ದಾರೆ.
‘ಅಯ್ಯಪ್ಪನುಂ ಕೊಶಿಯಮ್’ ಸಿನಿಮಾ ಎರಡು ಪ್ರಮುಖ ಪಾತ್ರಗಳ ಮೇಲೆ ನಿಂತಿದೆ. ಅಯ್ಯಪ್ಪನುಂ ಕೊಶಿಯನ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಅಯ್ಯಪ್ಪನ್ ನಯ್ಯರ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಿರ್ಮಿಸಿರುವ ನಿವೃತ್ತ ಹವಾಲ್ದಾರ್ ಬಿಜು ಮೆನನ್ ಮಧ್ಯೆ ನಡೆಯುವ ಅಹಂ ಯುದ್ಧವನ್ನು ಚಿತ್ರೀಕರಿಸಲಾಗಿದೆ.
ಪವನ್ ಕಲ್ಯಾಣ್ ಬಿಜು ಮೆನನ್ ಪಾತ್ರ ನಿರ್ವಹಿಸಿದರೆ, ಕಿಚ್ಚ ಸುದೀಪ್ ಪೃತ್ವಿ ರಾಜ್ ಸುಕುಮಾರನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುರಿತು ಚರ್ಚೆ ನಡೆಯುತ್ತಿದೆ.
ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಹಾಗೂ ಕಿಚ್ಚು ಸುದೀಪ್ ಸರಿ ಸಮನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಡಾಲಿ “ರತ್ನನ್ ಪ್ರಪಂಚ”ದ ಶೂಟಿಂಗ್ ಗೆ ಮುಹೂರ್ತ ಫಿಕ್ಸ್..!
ಇನ್ನೂ ವಿಶೇಷ ಸಂಗತಿ ಎಂದರೆ ಅಯ್ಯಪ್ಪನುಂ ಕೊಶಿಯನ್ ಸಿನಿಮಾವನ್ನು ತೆಲುಗು ಮಾತ್ರವಲ್ಲ, ತಮಿಳು ಹಾಗೂ ಹಿಂದಿಯಲ್ಲಿ ಸಹ ರಿಮೇಕ್ ಮಾಡಲಾಗುತ್ತಿದೆ.
ಹೀಗಾಗಿ ಈ ಸಿನಿಮಾ ಭಾರೀ ಸದು ಮಾಡುತ್ತಿದೆ. ಆದ್ರೆ ಈ ಬಗ್ಗೆ ಕಿಚ್ಚ ಸುದೀಪ್ ಅವರಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel











