Pawan Kalyan: ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ – ಪವನ್ ಕಲ್ಯಾಣ್….
ಖಿನ್ನತೆಯಿಂದಾಗಿ ನಾನು 17ನೇ ವರ್ಷಕ್ಕೆ ಅಣ್ಣ(ಚಿರಂಜೀವಿ) ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಎಂದುಕೊಂಡಿದ್ದೆ ಎಂಬ ವಿಷಯನ್ನ ನಟ ಪವನ್ ಕಲ್ಯಾಣ್ ಇದೀಗ ಬಹಿರಂಗ ಪಡಿಸಿದ್ದಾರೆ.
ತೆಲುಗು OTT ಪ್ಲಾಟ್ ಫಾರ್ಮ್ ಆಹಾ ನಲ್ಲಿ ನಟ ನಂದಮೂರಿ ಬಾಲಕೃಷ್ಣ ನಡೆಡಸಿಕೊಡುವ ಅನ್‌ಸ್ಟಾಪಬಲ್ ಸೀಸನ್ 2 ಶೋ ನಲ್ಲಿ ಪವನ್ ಕಲ್ಯಾಣ್ ಈ ವಿಷಯವನ್ನ ಹಂಚಿಕೊಂಡಿದ್ದಾರೆ. ನಟ ಪವನ್ ಕಲ್ಯಾಣ್ ಅವರ ಪ್ರೋಗ್ರಾಂ ಎರಡು ಭಾಗಗಳಲ್ಲಿ ಬರುತ್ತಿದ್ದು ಮೊದಲ ಭಾಗ ಈಗಾಗಲೇ ಬಿಡುಗಡೆಯಾಗಿದೆ. 2 ಭಾಗ ಫೆ 10 ಕ್ಕೆ ಬಿಡುಗಡೆಯಾಗಲಿದೆ.
ನಟ ಸಿಂಹ ಬಾಲಯ್ಯ ಜೊತೆ ಅನುಭವ ಹಂಚಿಕೊಂಡಿರುವ ಪವರ್ ಸ್ಟಾರ್ “ಖಿನ್ನತೆಯೊಂದಿಗಿನ ನನ್ನ ಹೋರಾಟವು ಅಪಾರವಾಗಿತ್ತು, ಆದರೆ ನಾನು ಅದರ ವಿರುದ್ಧ ಹೋರಾಡಿದೆ. ನಾನು ಆಸ್ತಮಾ ರೋಗಿ, ಆಗಾಗ್ಗೆ ಆಸ್ಪತ್ರೆಗೆ ದಾಖಲಾಗುವ ಕಾರಣದಿಂದಾಗಿ ನಾನು ಪ್ರತ್ಯೇಕವಾಗಿರುತ್ತಿದ್ದೆ. ನಾನು ಸೋಶಿಯಲ್ ವ್ಯಕ್ತಿ ಅಲ್ಲ. 17ನೇ ವಯಸ್ಸಿಗೆ ಪರೀಕ್ಷೆ ನನ್ನನ್ನು ಡಿಪ್ರೆಶನ್‌ಗೆ ಹೋಗುವಂತೆ ಮಾಡಿತು. ಅಣ್ಣ ಚಿರಂಜೀವಿ ಮನೆಯಲ್ಲಿ ಇಲ್ಲದಿರುವಾಗ ಅವನ ಬಳಿ ಇದ್ದ ಲೈಸೆನ್ಸ್ ಗನ್‌ನಿಂದ ನಾನು ನನ್ನ ಜೀವನವನ್ನು ಮುಗಿಸಿಕೊಳ್ಳಬೇಕು ಎಂದುಕೊಂಡಿದ್ದೆ ಎಂದು ನೆನೆನಪಿಸಿಕೊಂಡಿದ್ದಾರೆ.
ಇದಷ್ಟೆ ಅಲ್ಲದೇ ರಾಜಕೀಯ ಜೀವನ, ವೈಯಕ್ತಿಕ ಜೀವನ ಸಿದ್ದಾಂತ ಆಂಧ್ರಪ್ರದೇಶದ ರಾಜಕೀಯ ಕುರಿತಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
Pawan Kalyan: Thought of suicide due to depression – Pawan Kalyan….








