Paytm PhonePe Platform Fees – ರೀಚಾರ್ಜ್, ಬಿಲ್ ಪಾವತಿಗಳು ದುಬಾರಿ…
ನೀವು Paytm ಅಥವಾ PhonePe ಮೂಲಕ ಮೊಬೈಲ್ ರೀಚಾರ್ಜ್ ಅಥವಾ ಬಿಲ್ ಪಾವತಿಯನ್ನು ಬಳಸುತ್ತಿದ್ದರೆ ಸ್ವಲ್ಪ ಗಮನಿಸಿ ಮತ್ತು ಜಾಗರೂಕರಾಗಿರಿ ಈ ಆನ್‌ಲೈನ್ ಅಪ್ಲಿಕೇಶನ್ ಗಳು ರೀಚಾರ್ಜ್ ಮತ್ತು ಬಿಲ್ ಪಾವತಿ ವೇಳೆ ಪ್ಲಾಟ್‌ಫಾರ್ಮ್ ಶುಲ್ಕದ ಹೆಸರಿನಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಶುಲ್ಕವನ್ನ ವಿಧಿಸಲು ಪ್ರಾರಂಭಿಸಿವೆ. ಎರಡೂ ಅಪ್ಲಿಕೇಶನ್‌ಗಳು ಪ್ರತ್ಯೇಕವಾಗಿ ಪ್ಲಾಟ್‌ಫಾರ್ಮ್ Fee ಅನ್ನ ನಿಗದಿಪಡಿಸಿವೆ.
Paytm ಅಥವಾ PhonePe ಅಪ್ಲಿಕೇಶನ್ ಮೂಲಕ ರೀಚಾರ್ಜ್ ಅಥವಾ ಬಿಲ್ ಪಾವತಿಗೆ ಕ್ಯಾಶ್ ಬ್ಯಾಕ್ ನೀಡುತ್ತಿದ್ದ ಕಾಲವೊಂದಿತತು. ಆದರೀಗ ಸಮಯ ಬದಲಾಗಿದ್ದು, ಅಪ್ಲಿಕೇಶನ್ ಬಳಸಿ ರೀಚಾರ್ಜ್ ಮಾಡಿಕೊಂಡಿದ್ದಕ್ಕೆ ನಾವೇ ದುಡ್ಡು ತೆರಬೇಕಿದೆ. ವಿದ್ಯುತ್ ಬಿಲ್, ಮೊಬೈಲ್ ರೀಚಾರ್ಜ್ DTH ರೀಚಾರ್ಜ್ ಅಥವಾ ಯಾವುದೇ ರೀತಿಯ ವಹಿವಾಟು ನಡೆಸಿದ್ದಕ್ಕೆ ಪ್ಲಾಟ್‌ಫಾರ್ಮ್ ಶುಲ್ಕವನ್ನ ಪಾವತಿಸಬೇಕಾಗುತ್ತದೆ.
ಪ್ಲಾಟ್‌ಫಾರ್ಮ್ ಶುಲ್ಕ ಎಂದರೇನು
PhonePe ಪ್ರಕಾರ, ಪ್ಲಾಟ್‌ಫಾರ್ಮ್ ಶುಲ್ಕ ಎನ್ನುವುದು ನಾಮಮಾತ್ರ ಶುಲ್ಕವಾಗಿದ್ದು, ಅಪ್ಲಿಕೇಶನ್ ಬಳಸುವ ಗ್ರಾಹಕರಿಗೆ ಸೇವೆಯನ್ನ ಒದಗಿಸಲು ವಿಧಿಸಲಾಗುತ್ತದೆ. ಇದು ಜಿಎಸ್‌ಟಿ ಶುಲ್ಕವನ್ನೂ ಒಳಗೊಂಡಿರುತ್ತದೆ. ಮೊಬೈಲ್ ರೀಚಾರ್ಜ್ ವಿಫಲವಾದರೆ, ಜಿಎಸ್‌ಟಿ ಸೇರಿದಂತೆ ಸಂಪೂರ್ಣ ರೀಚಾರ್ಜ್ ಮೊತ್ತವನ್ನು ಮರುಪಾವತಿಸಲಾಗುತ್ತದೆ ಎಂದು ಪೋನ್ ಪೇ ತಿಳಿಸಿದೆ.
Paytm ಮತ್ತು PhonePe ಪ್ಲಾಟ್‌ಫಾರ್ಮ್ ಶುಲ್ಕದ ಹೆಸರಿನಲ್ಲಿ ವಿಭಿನ್ನ ಶುಲ್ಕಗಳನ್ನ ನಿಗದಿಪಡಿಸಿವೆ. Paytm ನಿಂದ ಮೊಬೈಲ್ ರೀಚಾರ್ಜ್ ಮಾಡುವಾಗ, ನೀವು ಪ್ಲಾಟ್‌ಫಾರ್ಮ್ ಶುಲ್ಕದ ಹೆಸರಿನಲ್ಲಿ ಒಂದು ರೂಪಾಯಿಗೂ ಹೆಚ್ಚು ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ಏರ್‌ಟೆಲ್ ಮೊಬೈಲ್ ರೀಚಾರ್ಜ್‌ಗೆ 30 ದಿನಗಳವರೆಗೆ 296 ರೂ. ರೀಚಾರ್ಜ್ ಇದ್ದರೆ 297 ರೂಪಾಯಿ ಪಾವತಿಸಬೇಕಾಗುತ್ತದೆ. ಅದೇ PhonePeನಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವಾಗಿ ರೂ 2 ಶುಲ್ಕವನ್ನು ನಿಗದಿಪಡಿಸಿದೆ. ನೀವು 296 ರೂಪಾಯಿಗಳಿಗೆ ರೀಚಾರ್ಜ್ ಗೆ 298 ರೂಪಾಯಿಗಳನ್ನ ಪಾವತಿಸಬೇಕಾಗುತ್ತದೆ. ಇದರ ವಿರುದ್ಧ ಅನೇಕ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








