ಐಪಿಎಲ್ 2021 | ಕಿಂಗ್ಸ್ ವರ್ಸಸ್ ಸೂಪರ್ ಕಿಂಗ್ಸ್ , ಗೆಲುವು ಯಾರಿಗೆ..?
ಇಂದಿನ ಐಪಿಎಲ್ ದಂಗಲ್ ನಲ್ಲಿ ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಟೂರ್ನಿಯಲ್ಲಿ ಎರಡು ತಂಡಗಳು ಒಂದೊಂದು ಪಂದ್ಯಗಳನ್ನ ಆಡಿವೆ. ಮೊದಲ ಮ್ಯಾಚ್ ನಲ್ಲಿ ಪಂಜಾಬ್ ತಂಡ ಗೆಲುವಿನ ನಗೆ ಬೀರಿದ್ದರೇ ಚೆನ್ನೈ ಸೋಲುಂಡಿದೆ.
ಹೆಡ್ ಟು ಹೆಟ್
ಐಪಿಎಲ್ ನಲ್ಲಿ ಈ ಎರಡು ತಂಡಗಳು 23 ಪಂದ್ಯಗನ್ನಾಡಿದ್ದು, ಚೆನ್ನೈ ತಂಡ 14 ಬಾರಿ ಪಂದ್ಯ ಗೆದ್ದುಕೊಂಡಿದೆ. 9 ಬಾರಿ ಮಾತ್ರ ಪಂಜಾಬ್ ತಂಡ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದೆ. ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಚೆನ್ನೈಗೆ ಫೇವರ್ ಆಗಿದೆ.
ಗ್ರೌಂಡ್ ರಿಪೋರ್ಟ್
ಮುಂಬೈನ ವಾಂಖೇಡೆ ಸ್ಟೆಡಿಯಂನಲ್ಲಿ ಇಂದಿನ ಪಂದ್ಯದಲ್ಲಿ ಮ್ಯಾಚ್ ನಡೆಯಲಿದೆ. ಸಾಮಾನ್ಯವಾಗಿ ಇದು ಹೈಸ್ಕೋರಿಂಗ್ ಮ್ಯಾಚ್ ಆಗಲಿದೆ. ಮುಖ್ಯವಾಗಿ ಸೆಕೆಂಡ್ ಬ್ಯಾಟಿಂಗ್ ಮಾಡುವವರಿಗೆ ಪಿಚ್ ಹೆಲ್ಫ್ ಫುಲ್ ಆಗಿರಲಿದೆ. ಇದೇ ಕಾರಣಕ್ಕೆ ಟಾಸ್ ಗೆದ್ದವರು ಬ್ಯಾಟಿಂಗ್ ಆಯ್ದುಕೊಳ್ಳಲಿದ್ದಾರೆ.
ಬಲಾಬಲಗಳೇನು..?
ಚೆನ್ನೈ ಸೂಪರ್ ಕಿಂಗ್ಸ್ : ಸುರೇಶ್ ರೈನಾ, ಮೊಯಿಲ್ ಅಲಿ ಕಳೆದ ಮ್ಯಾಚ್ ನಲ್ಲಿ ಅಬ್ಬರಿಸಿದ್ದು, ರವೀಂದ್ರ ಜಡೇಜಾ, ಸ್ಯಾಮ್ ಕರನ್ ಉತ್ತಮ ಲಯದಲ್ಲಿರುವುದು ತಂಡಕ್ಕೆ ಬೂಸ್ಟ್ ನೀಡಿದೆ. ಮುಖ್ಯವಾಗಿ ಬೌಲಿಂಗ್ ನಲ್ಲಿ ತಂಡ ವೀಕ್ ಇದೆ ಅಂತ ಹೇಳಬಹುದು. ಯಾಕೆಂದ್ರೆ ತಂಡದಲ್ಲಿ ವಿಕೆಟ್ ಟೆಕಿಂಗ್ ಪ್ಲೇಯರ್ ಇಲ್ಲ. ವಿದೇಶಿ ಬೌಲರ್ ಗಳ ಕೊರತೆ ಕಾಡುತ್ತಿದೆ.
ಪಂಜಾಬ್ ಕಿಂಗ್ಸ್ : ರಾಹುಲ್, ಗೇಲ್, ಮಯಾಂಕ್, ದೀಪಕ್ ಹೂಡಾ, ಪೂರನ್ ತಂಡದ ಬ್ರಹ್ಮಾಸ್ತ್ರಗಳಾಗಿದ್ದಾರೆ. ಈ ಎಲ್ಲಾ ಬ್ಯಾಟ್ಸ್ ಮೆನ್ ಗಳು ಉತ್ತಮ ಲಯದಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇವರಲ್ಲಿ ಯಾರೊಬ್ಬರಾದ್ರು ಅಬ್ಬರಿಸಿದ್ರೆ ಖೇಲ್ ಖತಂ ನಾಟಕ್ ಬಂದ್ ಅಷ್ಟೆ.
ವಿಕ್ನೆಸ್ ಅಂದ್ರೆ ಬೌಲಿಂಗ್ ವಿಭಾಗದಲ್ಲಿ ಧಮ್ ಇಲ್ಲ. ಮುಖ್ಯವಾಗಿ ವಿದೇಶಿ ಬೌಲರ್ ಗಳು ದುಬಾರಿ ಆಗುತ್ತಿದ್ದಾರೆ. ಶಮಿ ಇದ್ದರೂ ಮೊದಲಿನ ಆಟವಾಡುತ್ತಿಲ್ಲ.
ಬೆಸ್ಟ್ ಇಲೆವೆಲ್
ಪಂಜಾಬ್ ಕಿಂಗ್ಸ್ : ರಾಹುಲ್, ಮಯಾಂಕ್, ಗೇಲ್, ಪೂರನ್, ದೀಪಕ್ ಹೂಡಾ, ಶಾರುಖ್ ಖಾನ್, ಜೋರ್ಡನ್, ಜೈ ರಿಚರ್ಡ್ ಸನ್, ಶಮಿ, ಅರ್ಶಿದೀಪ್ ಸಿಂಗ್, ಮುರುಗನ್ ಅಶ್ವಿನ್
ಸೂಪರ್ ಕಿಂಗ್ಸ್ : ಗಾಯಕ್ವಾಡ್, ಮೋಯಿನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಜಡೇಜಾ, ಧೋನಿ, ಸ್ಯಾಮ್ ಕರನ್, ಬ್ರಾವೋ, ಶರ್ದೂಲ್ ಠಾಕೂರ್, ದೀಪಕ್ ಚಹಾರ್, ತಾಹೀರ್
ವಿನ್ನಿಂಗ್ ಚಾನ್ಸನ್
ಸೆಕೆಂಡ್ ಬ್ಯಾಟಿಂಗ್ ಮಾಡೋ ತಂಡ ಗೆಲ್ಲುವ ಸಾಧ್ಯತೆ ಇದೆ. ಆದ್ರೂ ಪಂಜಾಬ್ ತಂಡ ಸಾಲಿಡ್ ಆಗಿದೆ. ಆದ್ದರಿಂದ 51% ಪಂಜಾಬ್ ಗೆ ಗೆಲ್ಲೋ ಚಾನ್ಸ್ ಇದೆ.










