ಅತ್ಯಾಚಾರ ಆರೋಪಿ ನಟನ ಬೆಂಬಲಕ್ಕೆ ನಿಂತ ಹಿಂದಿ ಕಿರುತೆರೆ ತಾರೆಯರು
ಹಿಂದಿ ಕಿರುತೆರೆಯ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ಪರ್ಲ್ ವಿ ಪುರಿ ವಿರುದ್ಧ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ.. ಅಲ್ಲದೇ ಪ್ರಕರಣ ದಾಖಲಾದ ಬೆನ್ನಲ್ಲೇ ನಟನನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅಂದ್ಹಾಗೆ ಪರ್ಲ್ ಹಿಂದಿ ಟಿವಿ ಜಗತ್ತಿನ ಚಿರ ಪರಿಚಿತ ಮುಖ… ಖ್ಯಾತ ನಟ. ನಾಗಿನ್ , ಬೇಫನಾ ಸೇರಿದಂತೆ ಹಲವಾರು ಖ್ಯಾತ ದಾರವಾಹಿಗಳಲ್ಲಿ ಬಣ್ಣ ಹಚ್ಚಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
ಇದೀಗ ಅವರು ಅತ್ಯಾಚಾರದ ಆರೋಪಡಿ ಜೈಲು ಸೇರಿದ್ದು, ಹಿಂದಿ ಕಿರುತೆರೆಯ ಖ್ಯಾತ ನಿರ್ಮಾಪಕಿ ಹಾಗೂ ನಟಿ ಪರ್ಲ್ ಸಹಾಯಕ್ಕೆ ಮುಂದಾಗಿದ್ದಾರೆ.. ಹೌದು ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ‘ಸಂತ್ರಸ್ತೆಯ ತಾಯಿಯೇ ನನಗೆ ಹೇಳಿದ್ದಾಳೆ ಪರ್ಲ್ ದು ಏನೂ ತಪ್ಪಿಲ್ಲ ಎಂದು’ ಈ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಏಕ್ತಾ , ‘ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಯನ್ನು ಬಲವಂತವಾಗಿ ಬಲಿ ಪಡೆಯಲಾಗುತ್ತಿದೆ. ಸಂತ್ರಸ್ತೆಯ ತಾಯಿಯೇ ನನಗೆ ಹೇಳಿದ್ದಾಳೆ, ಆಕೆಯ ಪತಿ ಉದ್ದೇಶಪೂರ್ವಕವಾಗಿ ಪುರಿ ಹೆಸರು ಎಳೆದು ತಂದಿದ್ದಾನೆ’ ಎಂದಿದ್ದಾರೆ.
ಚಿತ್ರೀಕರಣದಲ್ಲಿ ತೊಡಗಿದ್ದ ಮಹಿಳೆ ಆಕೆಯ ಮಗಳನ್ನು ಸೆಟ್ನಲ್ಲಿ ಬಿಟ್ಟಿದ್ದಾಗ ವಿ ಪುರಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಆಕೆಯ ತಂದೆ-ತಾಯಿಯ ನಡುವೆ ಪರಸ್ಪರ ಜಗಳಗಳು ನಡೆಯುತ್ತಿದ್ದು ಅದೇ ಕಾರಣಕ್ಕೆ ತಂದೆ ಉದ್ದೇಶಪೂರ್ವಕವಾಗಿ ಈ ದೂರು ನೀಡಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ಈಗಾಗಲೇ ಏಕ್ತಾ ಕಪೂರ್ ನಿರ್ಮಾಣದ ನಾಗಿನ್ ಧಾರಾವಾಹಿಯಲ್ಲಿ ಪರ್ಲ್ ಮುಖ್ಯಭೂಮಿಕೆ ನಿಭಾಯಿಸಿದ್ದರು.. ಈ ದಾರಾವಹಿಯಿಂದಲೇ ಪರ್ಲ್ ಫೇಮ್ ಮತ್ತಷ್ಟು ಹೆಚ್ಚಾಗಿತ್ತು. ಇನ್ನೂ ನಟಿ ಅಸ್ಮಿತಾ ಸೂದ್ ಸಹ ಪುರಿಗೆ ಬೆಂಬಲ ವ್ಯಕ್ತಪಡಿಸಿದ್ದು, ‘ನಟ ಪರ್ಲ್ ವಿ ಪುರಿ ಜೊತೆಗೆ 2015 ರಿಂದಲೂ ನಾನು ಕೆಲಸ ಮಾಡಿದ್ದೇನೆ. ಆತ ಆ ರೀತಿಯ ವ್ಯಕ್ತಿ ಅಲ್ಲ. ಸೂಕ್ತವಾಗಿ ತನಿಖೆ ನಡೆದು ಸತ್ಯ ಹೊರಗೆ ಬರಬೇಕು’ ಎಂದಿದ್ದಾರೆ. ಅಲ್ಲದೇ ನಾಗಿನ್ ಸೀರೀಸ್ ನಲ್ಲಿಯೇ ಕಾಣಿಸಿಕೊಂಡಿರುವ ನಟಿ ಅನಿತಾ ಹಂಸಾನಂದಾನಿ, ಕ್ರಿಸ್ಟಲ್ ಡಿ ಸೋಜಾ ಸೇರಿದಂತೆ ಅನೇಕರು ಪರ್ಲ್ ಪರ ನಿಂತಿದ್ದಾರೆ.