ಪಿಂಚಣೆದಾರರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ..!
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 75 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿದಾರರಿಗೆ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಮತ್ತು ಸರ್ಕಾರಕ್ಕೆ ಪಾವತಿಸಲು ಅನ್ವಯವಾಗುವ ತೆರಿಗೆಗಳನ್ನು ಲೆಕ್ಕಹಾಕಲು ಮತ್ತು ಕಡಿತಗೊಳಿಸಲು ತಮ್ಮ ಬ್ಯಾಂಕುಗಳಿಗೆ ಅಧಿಕಾರ ನೀಡಲು ನಿಯಮಗಳನ್ನ ಸೂಚಿಸಿದೆ.
CBDT ಸೂಚಿಸಿದ ಆದಾಯ ತೆರಿಗೆ (26 ನೇ ತಿದ್ದುಪಡಿ) ನಿಯಮಗಳು ಪಿಂಚಣಿ ಪಡೆಯಲು ಅರ್ಹರಾದ ಹಿರಿಯ ನಾಗರಿಕರಿಗೆ, ಅದೇ ಬ್ಯಾಂಕಿನಲ್ಲಿ ಪಿಂಚಣಿ ಆದಾಯ ಮತ್ತು ಬಡ್ಡಿ ಆದಾಯ ಹೊಂದಿರುವವರಿಗೆ ಈ ಸೌಲಭ್ಯ ಸಿಗಲಿದೆ. ಈ ಲಾಭವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು FY22 ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ್ದರು. ನಾವು 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಮ್ಮ ಹಿರಿಯ ನಾಗರಿಕರ ಮೇಲೆ ಅನುಸರಣೆ ಹೊರೆ ಕಡಿಮೆ ಮಾಡುತ್ತೇವೆ. ಕೇವಲ ಪಿಂಚಣಿ ಮತ್ತು ಬಡ್ಡಿ ಆದಾಯ ಹೊಂದಿರುವ ಹಿರಿಯ ನಾಗರಿಕರಿಗೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ನೀಡುತ್ತೇವೆ.
ಕೋವಿಡ್ ರಿಪೋರ್ಟ್ – ದೇಶದಲ್ಲಿ ಒಂದೇ ದಿನ 38,948 ಕೇಸ್ ಪತ್ತೆ
ಪಾವತಿಸುವ ಬ್ಯಾಂಕ್ ಅವರ ಆದಾಯದ ಮೇಲೆ ಅಗತ್ಯವಾದ ತೆರಿಗೆಯನ್ನು ಕಡಿತಗೊಳಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದರು. ಸರ್ಕಾರವು ಈಗ ನಿಯಮಗಳನ್ನು ಮತ್ತು ಹಿರಿಯ ನಾಗರಿಕರು ತಮ್ಮ ಬ್ಯಾಂಕ್‌ಗೆ ಸಲ್ಲಿಸಬೇಕಾದ ಫಾರ್ಮ್‌ಗಳನ್ನು ಪರಿಚಯಿಸಿದೆ. ಪಿಂಚಣಿ ಪಡೆದ ಅದೇ ಬ್ಯಾಂಕ್ ಖಾತೆಯಲ್ಲಿ ಬಡ್ಡಿ ಆದಾಯವನ್ನು ಗಳಿಸಬೇಕು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139 ರಿಟರ್ನ್ ಫೈಲಿಂಗ್ ಬಾಧ್ಯತೆಗೆ ಸಂಬಂಧಿಸಿರುವುದು ಈ ಸಂದರ್ಭಗಳಲ್ಲಿ ಅನ್ವಯಿಸುವುದಿಲ್ಲ.
ಪಂಜಶೀರ್ ವಶಕ್ಕೆ ಪಡೆದುಕೊಂಡಾಗಿದೆ ಎಂದ ತಾಲಿಬಾನ್..!
ಬೆಳಗಾವಿ ಪಾಲಿಕೆಯಲ್ಲಿ ಅರಳಿದ ಕಮಲ – 17 ವರ್ಷಗಳ ಬಳಿಕ ಅಧಿಕಾರಕ್ಕೇರಿದ ಬಿಜೆಪಿ








