ರಂಜಾನ್ ಖರೀದಿಗೆ ಮುಗಿಬಿದ್ದ ಜನ, ಸಾಮಾಜಿಕ ಅಂತರವೇ ಮಾಯ
ರಾಯಚೂರು : ಪಟ್ಟಣದ ಹೃದಯ ಭಾಗವಾದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಮತ್ತು ಬಟ್ಟೆ ಬಜಾರನಲ್ಲಿ ರಂಜಾನ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರ ಖರೀದಿ ಜೋರಾಗಿಯೇ ನಡೆದಿದ್ದು ಖರೀದಿಯ ಗುಂಗಲ್ಲಿ ಕೋವಿಡ್ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ.
ಹಲವು ವ್ಯಾಪಾರಿಗಳು ಮಾಸ್ಕ ಕೂಡ ಧರಿಸದೇ ವ್ಯಾಪಾರದಲ್ಲಿ ತೊಡಗಿದ್ದಾರೆ. ಜನರು ಕೂಡ ಸಾಮಾಜಿಕ ಅಂತರ ವಿಲ್ಲದೇ ಖರೀದಿಯಲ್ಲಿ ಮಗ್ನರಾಗಿದ್ದರು.
ಜಿಲ್ಲೆಯಲ್ಲಿ ಕೊರೊನಾ ಆವಳಿ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಕೈ ಜಾರಿ ಹೋಗುವ ಎಲ್ಲಾ ಸಾಧ್ಯತೆಗಳಿವೆ.
ಜಿಲ್ಲೆಯಲ್ಲಿ ಈಗಾಗಲೇ ಕೊರೊನಾಗೆ ಸಾಕಷ್ಟು ಮಂದಿ ಬಲಿಯಾಗಿದ್ದಾರೆ.
ಇಷ್ಟೆಲ್ಲಾ ಅನಾಹುತಗಳು ನಡೆಯುತ್ತಿದ್ದರೂ ಜನರು ಮಾತ್ರ ಮಾಸ್ಕ್ ಸರಿಯಾಗಿ ಧರಿಸದೇ, ಸಾಮಾಜಿಕ ಅಂತರವಿಲ್ಲದೇ ವ್ಯಾಪಾರದಲ್ಲಿ ತೊಂಡಿದ್ದರು.










