People Forgotten Humanity -ಲಖನೌ: ೧೨ ವರ್ಷದ ಯುವತಿಯೋಬ್ಬಳು ತೀವ್ರ ರಕ್ತಸ್ರಾವದಿಂದ ಬಳಲಿ ಅಸ್ವಸ್ಥಳಾಗಿ ಸಹಾಯ ಅರಚಿ ಬಿದ್ದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕನೌಜ್ನಲ್ಲಿ ನಡೆದಿದೆ.
ಈ ಘಟನೆಯಲ್ಲಿ ಯುವತಿಯ ಸುತ್ತಲು ಗಂಡಸರು ನಿಂತಿದ್ದರು ಬಾಲಕಿಗೆ ಸಹಾಯ ಮಾಡದೆ ಆಕೆಯ ಸುತ್ತಲೂ ನಿಂತು ವಿಡಿಯೊ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲಗಾಣಗಳಲ್ಲಿ ವೈರಲ್ ಆಗಿದೆ.
ಈ ಆಘಾತಕಾರಿ ಘಟನೆಯ ನೊಡಿದ ನೂರಾರು ಮಂದಿ ಹೃದಯ ವಿದ್ರಾವಕ ವಿಡಿಯೊ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 24 ಸೆಕೆಂಡುಗಳ ಕ್ಲಿಪ್ನಲ್ಲಿ ಯುವತಿಯು ಸಹಾಯಕ್ಕಾಗಿ ಎಲ್ಲರ ಬಳಿ ಕೈ ಚಾಚಿ ನೆಲದ ಮೇಲೆ ಬಿದ್ದು ದುರ್ಬಲವಾಗಿರುವುದನ್ನು ಕಂಡು ಅಸಹಾಯಕವಾಗಿ ಮೇಲೆಳಲು ಆಗದೆ ಸಹಾಯಕ್ಕಾಗಿ ಯಾಚಿಸುತ್ತಿದ್ದರೂ ಯಾರು ಆ ಸ್ಥಳದಲ್ಲಿದ್ದ ಯಾರೊಬ್ಬರೂ ಆಕೆಯ ಸಹಾಯಕ್ಕೆ ಬಾರದಿರುವುದು ಮಾನವಿಯತೆ ಮರೆತಿರುವುದಕ್ಕೆ ಇದು ಸಾಕ್ಷಿಯಾಗಿದೆ.
https://twitter.com/NigarNawab/status/1584450742701928448?ref_src=twsrc%5Etfw%7Ctwcamp%5Etweetembed%7Ctwterm%5E1584450742701928448%7Ctwgr%5Ed65fe7e2cc0f0274160ab7fdc645de00c267f12d%7Ctwcon%5Es1_&ref_url=https%3A%2F%2Ftv9kannada.com%2Fnational%2Fgirl-found-injured-at-govt-guest-house-bystanders-record-videos-instead-of-help-dmg-au21-460231.html
ಅಲ್ಲಿನೆರೆದಿದ್ದ ಜನರಲ್ಲಿ ಯಾರೊ ಒಬ್ಬರು ತುರ್ತಾಗಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಂದ ನಂತರ ಬಾಲಕಿ ಕೈಯಲ್ಲಿ ಹೊತ್ತು ಆಟೋದಲ್ಲಿ ವೈದ್ಯರಬಳಿ ಕರೆದೊಯ್ದಿದ್ದಾರೆ . ಬಾಲಕಿಗೆ ಸಹಾಯ ಮಾಡಿದ ಪೊಲೀಸ್ ರು ಹೊರಠಾಣೆಯ ಉಸ್ತುವಾರಿ ಸಿಬ್ಬಂದಿ ಮನೋಜ್ ಪಾಂಡೆ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರಕ್ಕೆ ಕರೆದೊಯ್ಯಲಾಯಿತು. ಈ ವಿಡಿಯೊ ಸಾಮಾಜೀಕ ವೈರಲ್ ಆಗುತ್ತಿದೆ .
ಆ ಬಾಲಕಿಯ ಹೆಸರು ಮತ್ತು ಹೇಗೆ ಈ ಅಸಹಾಯಕ ಸ್ಥಿತಿಗೆ ತಲುಪಲು ಏನು ಕಾರಣ ಎಂಬುದೂ ತಿಳಿದು ಬಂದಿಲ್ಲ. ತನಿಖೆಯ ವೇಳೆ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಿರುವ ಪೊಲೀಸರು ಆಕೆಯು ಗೆಳೆಯನೊಬ್ಬನ ಜೊತೆಗೆ ಗೆಸ್ಟ್ಹೌಸ್ಗೆ ಹೋಗುವುದನ್ನು ಪತ್ತೆ ಮಾಡಿದ್ದಾರೆ.







