ಅಪ್ರಾಪ್ತ ಬಾಲಕಿ ಪುಸಲಾಯಿಸಿ ಮದುವೆ!
ಗುಂಡ್ಲಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದಲ್ಲಿ ಘಟನೆ
ಯುವಕನನ್ನು ವಶಕ್ಕೆ ಪಡೆದ ಪೊಲೀಸರು
ಪೊಲೀಸರ ವಶಕ್ಕೆ ಮಹೇಂದ್ರ ಎಂಬ ಯುವಕ
ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ
ಚಾಮರಾಜನಗರ : ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಮದುವೆಯಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚವಾಗಿ ಗ್ರಾಮದಲ್ಲಿ ನಡೆದಿದೆ.
PERSON ARRESTED FOR MARRYING MINOR GIRL IN CHAMARAJANAGARA
ಬೆಳಚವಾಡಿ ಗ್ರಾಮದ ಮಹೇಂದ್ರ ಎಂಬ ಯುವಕ, ನಾಲ್ಕು ದಿನಗಳ ಹಿಂದೆ 16 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದನು.
ಈ ಸಂಬಂಧ ಬಾಲಕಿಯ ಪೋಷಕರು ಬೇಗೂರು ಪೊಲೀಸರಿಗೆ ದೂರು ನೀಡಿದ್ದರು.
ಪೋಷಕರ ದೂರಿನ ಮೇರೆಗೆ ಪೊಲೀಸರು ಯುವಕ ಆರೋಪಿ ಮಹೇಂದ್ರನನ್ನು ಬಂಧಿಸಿದ್ದಾರೆ.
ಇತ್ತ ಬಾಲಕಿಯನ್ನು ರಕ್ಷಿಸಿ, ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.