ಅಪ್ರಾಪ್ತ ವಿದ್ಯಾರ್ಥಿನಿಯ ಬೆತ್ತಲೆ ಪೋಟೋ ಬಳಸಿ, ಬ್ಲಾಕ್ ಮೇಲ್ – ಲವ್ ಜಿಹಾದ್ ಗೆ ಯತ್ನ : ಆರೋಪಿ ಬಂಧನ
ಮಂಗಳೂರು : 9ನೇ ತರಗತಿಯ ವಿದ್ಯಾರ್ಥಿಯೊಬ್ಬಳನ್ನ ಪರಿಚಯಮಾಡಿಕೊಂಡು ಆಕೆಯನ್ನು ಲವ್ ಜಿಹಾದ್ ಗೆ ಯತ್ನಿಸಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಿಂದ ಮಂಗಳೂರಿನ ಬೆಳ್ತಂಗಡಿಯಲ್ಲಿ ವಿದ್ಯಾಭ್ಯಾಸ ಮಾಡಲು ಬಂದ ಅಪ್ರಾಪ್ತ ಬಾಲಕಿಯ ಸ್ನೇಹ ಸಂಪಾದಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉಜಿರೆಯ ನಿವಾಸಿ ಮಹಮ್ಮದ್ ಅಮನ್ ಎಂಬಾತನನ್ನು ಬಂಧಿಸಲಾಗಿದೆ. ಅಲ್ಲದೇ ಆತನ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆ ದಾಖಲಿಸಿದ್ದಾರೆ.
ಅತ್ತೆ ಸೊಸೆ ‘ಹೈಟೆಕ್’ ವಾರ್..! ಫೇಸ್ ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ ಸೊಸೆಗೆ ಹೀಗಾ ಮಾಡೋದು..!
ಆರೋಪಿ ಮಹಮ್ಮದ್ ಅಮನ್ ಸ್ನೇಹಿತೆಯ ಮುಖಾಂತರ ಆಕೆಯ ಪಿಜಿಯಲ್ಲಿ ವಾಸವಿರುವ ಸಂತ್ರಸ್ತ ವಿದ್ಯಾರ್ಥಿನಿಯ ನಂಬರ್ ಪಡೆದು, ಸ್ನೇಹ ಬೆಳೆಸಿದ್ದಾನೆ. ನಂತರ ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಆಕೆಯ ಬೆತ್ತಲೆ ಫೋಟೋ ಪಡೆದು ನೀನು ನನ್ನ ಜೊತೆ ಬರಬೇಕು, ಇಲ್ಲವಾದರೆ ಫೋಟೊ ವೈರಲ್ ಮಾಡಬೇಕಾಗುತ್ತೆ ಎಂದು ಧಮ್ಕಿ ಹಾಕಿದ್ದಾನೆ. ಈತ ಆಕೆಗೆ ದಿನನಿತ್ಯ ವೀಡಿಯೊ ಕಾಲ್ ಮಾಡಿ ತೊಂದರೆ ಕೊಡುತ್ತಿದ್ದ ಎಂದು ತಿಳಿದು ಬಂದಿದ್ದು, ಈ ಹಿನ್ನಲೆ ವಿದ್ಯಾರ್ಥಿನಿಯ ಪೋಷಕರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಆರೋಪಿಯನ್ನು ಬೆಲ್ತಂಗಡಿ ಪೊಲೀಸರು ಬಂಧಿಸಿ ಬೆಂಗಳೂರಿನ ಪೊಲೀಸರ ಕೈಗೆ ಒಪ್ಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel