ಕೋಲಾರದಲ್ಲಿ ವ್ಯಕ್ತಿ ರಾಜಕಾರಣಕ್ಕಿಂತ ವ್ಯಕ್ತಿ ರಾಜಕಾರಣ ಹೆಚ್ಚು : ಹೆಚ್.ಡಿ.ಕುಮಾರಸ್ವಾಮಿ
ಕೋಲಾರ : ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ನ ರಮೇಶ್ ಕುಮಾರ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಎಂಎಲ್ ಸಿ ಚುನಾವಣೆ ಹಿನ್ನಲೆಯಲ್ಲಿ ಕೋಲಾರಕ್ಕೆ ಆಗಮಿಸಿರುವ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ವಕ್ಕಲೇರಿ ರಾಮು ಪರ ಪ್ರಚಾರ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕಾಂಗ್ರೆಸ್ ಗೆಲುವಿನಲ್ಲಿ ಗೋವಿಂದೆಗೌಡರ ಪಾತ್ರ ಜೋರಾಗಿದೆ. ಜಿಲ್ಲೆಯ ರಾಜಕಾರಣದಲ್ಲಿ ಪಕ್ಷಗಳಿಗಿಂತ ವ್ಯಕ್ತಿಗಳ ರಾಜಕಾರಣ ಜೋರಾಗಿದೆ. ಡಿಸಿಸಿ ಬ್ಯಾಂಕ್ ನಲ್ಲಿ ಅವ್ಯವಹಾರ ಮಾಡಿಸಿ, ಗೋವಿಂದಗೌಡರನ್ನ ಬೀದಿಗೆ ತಳ್ಳಿದ್ದಾರೆ. ಕೋಲಾರ ಜಿಲ್ಲೆಯ ರಾಜಕಾರಣ ಪಕ್ಷಗಳಿಗಿಂತ ವ್ಯಕ್ತಿಗಳು ತೆಗೆದುಕೊಳ್ಳುವ ತೀರ್ಮಾನದ ರಾಜಕಾರಣ ಜೋರಾಗಿದೆ. ಇಂದಿನ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ನಿರ್ಧಾರಗಳಿಂದ ಕೆಲವರಿಗೆ ಅನ್ಯಾಯವಾಗಿದೆ. ಜೆಡಿಎಸ್ ಅಭ್ಯರ್ಥಿ ವಕ್ಕಲೇರಿ ರಾಮು ನಿಷ್ಠಾವಂತ ಕಾರ್ಯಕರ್ತ.
ಅವಿಭಜಿತ ಕೋಲಾರ ಜಿಲ್ಲೆಯ ಮುಖಂಡರ ನಿರ್ಣಯದಂತೆ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ಎಂ ಎಲ್ ಎ ಚುನಾವಣೆಯಲ್ಲಿ ರಾಮುಗೆ ಬಿ ಫಾರಂ ಕೊಡಲಾಗಿತ್ತು. ಮುಖಂಡರುಗಳ ಒತ್ತಾಯದ ಮೇರೆಗೆ ಶ್ರೀನಿವಾಸಗೌಡರಿಗೆ ಕೊಡಲಾಗಿತ್ತು. ಶ್ರೀನಿವಾಸಗೌಡರ ಗೆಲುವಿಗೆ ವಕ್ಕಲೇರಿ ರಾಮು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ಗೆಲ್ಲಿಸಿದರು.
ಪಕ್ಷದಿಂದ ದೂರವಿರುವ ಶ್ರೀನಿವಾಸಗೌಡರಿಗೆ ಮತ ನೀಡುವಂತೆ ಮನವಿ ಮಾಡುತ್ತೇನೆ. ಶ್ರೀನಿವಾಸಗೌಡರು ದೇವೇಗೌಡರ ಕುಟುಂಬದ ಬಗ್ಗೆ ಏನೇ ಮಾತನಾಡಿದರು ಪರವಾಗಿಲ್ಲ. ಶ್ರೀನಿವಾಸಗೌಡರ ಗೆಲುವಿನಲ್ಲಿ ರಾಮು ಪಾತ್ರ ಬಹಳಷ್ಟಿದೆ. ವಕ್ಕಲೇರಿ ರಾಮು ರವರನ್ನ ಬೆಂಬಲಿಸುವಂತೆ ಶ್ರೀನಿವಾಸಗೌಡರಿಗೆ ಮನವಿ ಕುಮಾರಸ್ವಾಮಿ ಮನವಿ ಮಾಡಿದರು.
ಇದೇ ವೇಳೆ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಹಾನಿ ವಿಚಾರವಾಗಿ ಮಾತನಾಡಿದ ಅವರು, ರೈತರ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕೊಡುವ ಪರಿಹಾರ ರೈತರನ್ನ ಉಳಿಸಲು ಸಾಧ್ಯವಿಲ್ಲ. ನಿಯಮಗಳನ್ನ ಸಡಿಲಿಸಿ ಪರಿಹಾರ ಕೊಡುವಂತೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಅವಿಭಜಿತ ಕೋಲಾರ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಂಪೂರ್ಣ ಬೆಂಬಲವಿದೆ ಎಂದ ಕುಮಾರಸ್ವಾಮಿ, ಕೆಸಿ ವ್ಯಾಲಿ ಯೋಜನೆಯ ಮೂರನೇ ಹಂತದ ಶುದ್ದೀಕರಣಕ್ಕೆ ಒತ್ತಾಯಿಸಿದ್ದೆ. ಕೋಲಾರದ ತರಕಾರಿಗೆ ಮೊದಲು ಒಳ್ಳೆಯ ರೇಟ್ ಇತ್ತು. ಇದೀಗ ಕೋಲಾರದ ತರಕಾರಿಯನ್ನ ಮಾರ್ಕೆಟ್ ನಲ್ಲಿ ಕೇಳುವವರು ಇಲ್ಲ. ಕೆ ಸಿ ವ್ಯಾಲಿ ಯೋಜನೆಯಿಂದ ಬೆಳೆಗಳು ಪರಿಸ್ಥಿತಿ ಬಗ್ಗೆ ಅವಲೋಕಿಸಬೇಕಿದೆ. ಅಂತರ್ಜಲ, ಮನುಷ್ಯನ ಮೇಲೆ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಎತ್ತಿನ ಹೊಳೆ ಯೋಜನೆ ಹಣ ಲೂಟಿ ಮಾಡುವ ಯೋಜನೆಯಾಗಿದೆ ಎಂದು ಆರೋಪಿಸಿದರು.









