ಪೇಶಾವರದ ಮದರಸಾದಲ್ಲಿ ಬಾಂಬ್ ಸ್ಫೋಟ – ಏಳು ಜನರ ಸಾವು – ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ Peshawar madrasa explosion
ಪೇಶಾವರ, ಅಕ್ಟೋಬರ್27: ಪೇಶಾವರ ಹೊರವಲಯದಲ್ಲಿರುವ ಮದರಸಾದಲ್ಲಿ ಬಾಂಬ್ ಸ್ಫೋಟ ನಡೆದಿದೆ. Peshawar madrasa explosion

ಪೇಶಾವರದ ದಿರ್ ಕಾಲೋನಿಯಲ್ಲಿನ ಮದರಸಾದಲ್ಲಿ ಸ್ಫೋಟದ ನಂತರ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಡಾನ್ ಮಂಗಳವಾರ ವರದಿ ಮಾಡಿದೆ.
ಸ್ಫೋಟದ ಕಾರಣ ತಿಳಿದುಬಂದಿಲ್ಲವಾದರೂ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮನ್ಸೂರ್ ಅಮನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಗಾಯಗೊಂಡ ಕನಿಷ್ಠ 70 ಜನರನ್ನು ಲೇಡಿ ರೀಡಿಂಗ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ವೈದ್ಯಕೀಯ ಸೌಲಭ್ಯದ ವಕ್ತಾರರು ತಿಳಿಸಿದ್ದಾರೆ.
ಮಕ್ಕಳ ಡೇಟಾ ಕದಿಯುತ್ತಿದ್ದ ಮಕ್ಕಳ ಮೂರು ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಿಂದ ಔಟ್
ಜಾಮಿಯಾ ಜುಬೈರಿಯಾ ಮದರಸಾದ ಮುಖ್ಯ ಸಭಾಂಗಣದಲ್ಲಿ ಧರ್ಮಗುರು ಇಸ್ಲಾಂ ಧರ್ಮದ ಬೋಧನೆಗಳ ಬಗ್ಗೆ ಉಪನ್ಯಾಸ ನೀಡುತ್ತಿದ್ದಾಗ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ವಾಕರ್ ಅಜೀಮ್ ಹೇಳಿದ್ದಾರೆ. ಮದ್ರಸಾದಲ್ಲಿ ಪ್ಲಾಸ್ಟಿಕ್ ಬಾಂಬ್ ಇಟ್ಟು ಹೋದ ಕೆಲವೇ ನಿಮಿಷಗಳಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ.
ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ, ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದೆಂದು ಆಸ್ಪತ್ರೆಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಪೇಶಾವರ್ ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಪ್ರಾಂತೀಯ ರಾಜಧಾನಿ.
ಇತ್ತೀಚಿನ ವರ್ಷಗಳಲ್ಲಿ ಈ ಪ್ರಾಂತ್ಯವು ಇಂತಹ ಉಗ್ರಗಾಮಿ ದಾಳಿಯ ದೃಶ್ಯವಾಗಿದೆ. ನೈರುತ್ಯ ನಗರವಾದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟದಿಂದ ಎರಡು ಜನರು ಸಾವನ್ನಪ್ಪಿದ ಎರಡು ದಿನಗಳ ನಂತರ ಇತ್ತೀಚಿನ ದಾಳಿ ನಡೆದಿದೆ. ಕಳೆದ ತಿಂಗಳು, ಖೈಬರ್ ಪಖ್ತುನ್ಖ್ವಾ ನೌಶೇರಾದ ಅಕ್ಬರ್ಪುರ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐದು ಜನರು ಸಾವನ್ನಪ್ಪಿದರು ಮತ್ತು ಇಬ್ಬರು ಗಾಯಗೊಂಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








