ಕೊರೊನಾ ಬಿಕ್ಕಟ್ಟಿನ ಹಿನ್ನೆಲೆ ಪ್ರಸಿದ್ಧ ಅಮರಾಥ ಯಾತ್ರೆಗೆ ಈ ವರ್ಷ ಕಡಿವಾಣ ಹಾಕುವಂತೆ ಸುಪ್ರೀ ಕೋರ್ಟ್ ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಡಿ. ವೈ ಚಂದ್ರಚೂಡ್ ನೇತೃತ್ವದ ಪೀಠದಿಂದ ಮಹತ್ವದ ತೀರ್ಪು ಹೊರಬಿದ್ದಿದೆ. ಅಲ್ಲದೇ ಯಾತ್ರೆಗೆ ಕಡಿವಾಣ ಹಾಕುವುದು, ನಿಯಂತ್ರಣ ಹೇರುವುದು ಇವೆಲ್ಲ ಆಡಳಿತಾತ್ಮಕ ವಿಚಾರಗಳು. ಆಡಳಿತ ಮಂಡಳಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದೆ. 
ಅಮರಾಥ ಯಾತ್ರೆಗೆ ಪ್ರತಿ ವರ್ಷ ಲಕ್ಷಾಂತರ ಜನರು ತೆಳುತ್ತಿದ್ದರು. ಆದ್ರೆ ಈ ಬಾರಿ ವಿಶ್ವಾದ್ಯಂತ ಕೊರೊನಾ ಹಾವಳಿ ಹೆಚ್ಚಾಗ್ತಿದ್ದು, ಇದರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯವಾಗಿತ್ತೆ. ಹೀಗಾಗಿ ಯಾತ್ರೆಗೆ ಕಡಿವಾಣ ಹಾಕುವಂತೆ ಅಮರನಾಥ್ ಬರ್ಫಾನಿ ಲಂಗರ್ಸ್ ಸಂಸ್ಥೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದ್ರೆ ಇದೀಗ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.








