ಗಗನಕ್ಕೇರುತ್ತಿದೆ ತೈಲ ಬೆಲೆ : ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ..?
ನವದೆಹಲಿ : ಕೊರೊನಾ ಲಾಕ್ ಡೌನ್ ನಿಂದಾಗಿ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ದೇಶದಲ್ಲಿ ತೈಲ ಬೆಲೆ ಏರಿಕೆ ಮಾತ್ರ ನಿಲ್ಲುತ್ತಲೇ ಇಲ್ಲ.
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ 1 ಲೀಟರ್ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ.
ಕಳೆದ 1 ವರ್ಷದಿಂದ ಕೊರೊನಾ ವೈರಸ್ ನಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕೂಡ ಜನರನ್ನ ಕಾಡುತ್ತಿದೆ.
ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 95.09 ರೂ. ಇದೆ. ಮುಂಬೈನಲ್ಲಿ 101.03 ರೂ, ಜೈಪುರದಲ್ಲಿ 101.59 ರೂ, ಬೆಂಗಳೂರಿನಲ್ಲಿ 98.20 ರೂ, ಹೈದರಾಬಾದ್ ನಲ್ಲಿ 99.08 ರೂ, ತಿರುವನಂತಪುರದಲ್ಲಿ 96.47 ರೂ, ಚೆನ್ನೈನಲ್ಲಿ 96.23 ರೂ, ಕೊಲ್ಕತ್ತಾದಲ್ಲಿ 94.76 ರೂ.
ಇನ್ನು ಡೀಸೆಲ್ ಬೆಲೆ ಕೂಡ ಗಗನಮುಖಿಯಾಗಿದ್ದು, ಬೆಂಗಳೂರು, ಮುಂಬೈ, ಹೈದರಾಬಾದ್, ಜೈಪುರ, ಭುವನೇಶ್ವರ, ತಿರುವನಂತಪುರದಲ್ಲಿ 1 ಲೀಟರ್ ಡೀಸೆಲ್ ಬೆಲೆ 93 ರೂ. ದಾಟಿದೆ. ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್ ಗೆ 86.01 ರೂ. ಇದೆ.