15 ಪೈಸೆ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ
ನವದೆಹಲಿ : ಭಾರತದಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 15 ಪೈಸೆ ಇಳಿಕೆ ಕಂಡಿದೆ.
ಸರ್ಕಾರ ತೈಲ ಕಂಪನಿಗಳು ಇಂದು ಲೀಟರ್ ಪೆಟ್ರೊಲ್ ಬೆಲೆಯಲ್ಲಿ 10 ರಿಂದ 15 ಪೈಸೆ ಹಾಗೂ ಲೀಟರ್ ಡೀಸೆಲ್ ಬೆಲೆಯಲ್ಲಿ 15 ಪೈಸೆ ಇಳಿಕೆ ಮಾಡಿವೆ.
ಸತತ ಬೆಲೆ ಏರಿಕೆ ಬಳಿಕ ಇದೀಗ ತೈಲ ಬೆಲೆ ಇಳಿಕೆ ಕಂಡು ಬಂದಿದ್ದು, ಸರ್ಕಾರ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೊಲ್ ಬೆಲೆಯಲ್ಲಿ 10 ರಿಂದ 15 ಪೈಸೆ ಕಡಿತಗೊಳಿಸಿದ್ದರೇ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 15 ಪೈಸೆ ಇಳಿಕೆ ಮಾಡಿವೆ.
ಇದರೊಂದಿಗೆ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.19 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 88.62 ರೂಪಾಯಿ ನಿಗದಿ ಆಗಿದೆ.
ಇನ್ನು ಪೆಟ್ರೋಲ್ ದರ ಲೀಟರ್ ಗೆ ಚೆನ್ನೈನಲ್ಲಿ 98.96 ರೂ. ಇದ್ದರೇ, ಕೋಲ್ಕತಾದಲ್ಲಿ 101.62 ರೂ., ಬೆಂಗಳೂರಿನಲ್ಲಿ 104.70 ರೂ., ಮುಂಬೈನಲ್ಲಿ 107.26 ರೂ. ದರ ಇದೆ.









