ಶಿಲ್ಲಾಂಗ್ ನಲ್ಲಿ ಪೆಟ್ರೋಲ್ ಬಾಂಬ್ ದಾಳಿ : ಗೃಹ ಸಚಿವ ರಾಜೀನಾಮೆ Shillong saaksha tv
ಶಿಲ್ಲಾಂಗ್ : ಮೇಘಾಲಯದ ಸಿಎಂ ಕಾನ್ರಾಡ್ ಕೆ ಸಂಗ್ಮಾ ಅವರ ಖಾಸಗಿ ನಿವಾಸದ ಮೇಲೆ ಭಾನುವಾರ ರಾತ್ರಿ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ.
ಭಾನುವಾರ 10.15 ರ ಸುಮಾರಿಗೆ ಈ ಬಾಂಬ್ ದಾಳಿ ನಡೆದಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.
ದುಷ್ಕರ್ಮಿಗಳು ಎರಡು ಬಾಟಲ್ ಗಳನ್ನು ಎಸೆದಿದ್ದು, ಮೊದಲ ಬಾಟಲಿಯನ್ನು ಮನೆಯ ಮುಂಭಾಗಕ್ಕೆ ಎಸೆಯಲಾಗಿದ್ದು, ಎರಡನೆ ಬಾಟಲಿಯನ್ನು ಮನೆಯ ಹಿಂಭಾಗದಲ್ಲಿ ಹಾಕಲಾಗಿದೆ.
ಇದರಿಂದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿದ್ದ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ.
ಇನ್ನೊಂದೆಡೆ ನಿಷೇಧಿತ ಸಂಘಟನೆಯ ಮಾಜಿ ಬಂಡುಕೋರನನ್ನು ಎನ್‍ಕೌಂಟರ್‍ನಲ್ಲಿ ಕೊಂದ ಹಿನ್ನೆಲೆಯಲ್ಲಿ ಶಿಲ್ಲಾಂಗ್‍ನಲ್ಲಿ ಹಿಂಸಾಚಾರಗಳು ಸಂಭವಿಸಿವೆ.
ಹೀಗಾಗಿ ಮೇಘಾಲಯದ ಗೃಹ ಸಚಿವ ಲಹ್ಕ್‍ಮೆನ್ ರಿಂಬುಯಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರವು ಶಿಲ್ಲಾಂಗ್‍ನಲ್ಲಿ ಕಫ್ರ್ಯೂ ವಿಧಿಸಿದೆ.









