ದೇಶದಲ್ಲಿ ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ
ನವದೆಹಲಿ : ಕೊರೊನಾ ಕಾಟ, ಲಾಕ್ ಡೌನ್ ಸಂಕಷ್ಟದ ಮಧ್ಯೆ ದೇಶದಲ್ಲಿ ತೈಲ ಬೆಲೆ ಕೂಡ ಜನರ ಚಿಂತೆಗೆ ಕಾರಣವಾಗಿದೆ.
ಕಳೆದ ಎರಡು ದಿನಗಳಿಂದ ತಟಸ್ಥವಾಗಿದ್ದ ತೈಲೆ ಬೆಲೆ ಇಂದು ಮತ್ತೆ ಏರಿಕೆ ಕಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 19 ಪೈಸೆ ಏರಿಕೆ ಕಂಡು, ಲೀಟರ್ ಗೆ 93.04 ರೂಪಾಯಿ ಆದರೆ ಡೀಸೆಲ್ 29 ಪೈಸೆ ಏರಿಕೆ ಕಂಡು ಒಂದು ಲೀಟರ್ ಗೆ 83.80 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 96.14 ರೂಪಾಯಿ ಆದರೆ, ಡೀಸೆಲ್ ಬೆಲೆ 88.84 ರೂಪಾಯಿ ತಲುಪಿದೆ.
ಮುಂಬೈನಲ್ಲಿ ಪೆಟ್ರೋಲ್ ದರ 99.32 ರೂಪಾಯಿ, ಡೀಸೆಲ್ ದರ 91.01 ರೂಪಾಯಿ ತಲುಪಿದೆ.
ರಾಜಸ್ಥಾನದಲ್ಲಿ ಅತೀ ಹೆಚ್ಚು ಪೆಟ್ರೋಲ್ ಲೀಟರ್ ಗೆ 104 ರೂಪಾಯಿ ಆದರೆ, ಡೀಸೆಲ್ ಲೀಟರ್ ಗೆ 96.62 ರೂಪಾಯಿ ದಾಖಲಾಗಿದೆ.