ಸತತ ಮೂರನೇ ದಿನವೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ..! petrol
ಮುಂಬೈ : ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಚಿಲ್ಲರೆ ಇಂಧನ ವ್ಯಾಪಾರಿಗಳು ದೈನಂದಿನ ತೈಲ ದರ ಪರಿಷ್ಕರಣೆ ಪುನರಾರಂಭಿಸಿದ್ದರಿಂದ ಇದೀಗ ಮತ್ತೆ ತೈಲ ಬೆಲೆ ಏರಿಕೆ ಆಗುತ್ತಿದೆ.
ಇವತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 25 ಪೈಸೆ, ಡೀಸೆಲ್ ದರ 20 ಪೈಸೆ ಹೆಚ್ಚಾಗಿದೆ.
ಇದರ ಪರಿಣಾಮ ಪ್ರತಿ ಲೀಟರ್ಗೆ 90.99 ರೂ. ಮತ್ತು ಡೀಸೆಲ್ 81.42 ರೂ.ಗೆ ಮಾರಾಟವಾಗುತ್ತಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಪೆಟ್ರೋಲ್ 93.77 ಹಾಗೂ ಡೀಸೆಲ್ 86.01 ರೂ.ಯಲ್ಲಿ ಖರೀದಿ ಆಗುತ್ತಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಂಗಳವಾರ ಕ್ರಮವಾಗಿ 15 ಪೈಸೆ ಹಾಗೂ 18 ಪೈಸೆ ಹಾಗೂ ಬುಧವಾರ ಕ್ರಮವಾಗಿ 19 ಪೈಸೆ ಮತ್ತು 21 ಪೈಸೆ ಏರಿಕೆಯಾಗಿದ್ದವು.










