ಭಾನುವಾರ ಮತ್ತೆ ಏರಿಕೆಯಾದ ಪೆಟ್ರೋಲ್ ಡಿಸೇಲ್ ಬೆಲೆ
ನವದೆಹಲಿ: ಪೆಟ್ರೋಲ್ ಡಿಸೇಲ್ ಬೆಲೆ ಭಾನುವಾರ ಮತ್ತೆ 80 ಪೈಸೆ ಏರಿಕೆಯಾಗಿದೆ. ಈ ಮೂಲಕ ಕಳೆದ 13 ದಿನಗಳಿಂದ ಏರಿಕೆಯಾಗುತ್ತಿದ್ದು, ಒಟ್ಟಾರೆಯಾಗಿ 13 ದಿನಗಳಲ್ಲಿ ಲೀಟರ್ ಗೆ 8ರೂ ಏರಿಕೆಯಾಗಿದೆ.
ಉದ್ಯಾನವನ ನಗರದಲ್ಲಿ 107.32 ರೂ. ಇದ್ದ ಪೆಟ್ರೋಲ್ ದರ 108.99 ರೂಪಾಯಿಗೆ ಏರಿಕೆಯಾಗಿದೆ ಪ್ರತಿ ಲೀಟರ್‌ಗೆ 91.29 ರೂ. ಇದ್ದ ಡೀಸೆಲ್ ದರ ರೂ. 92.83ಕ್ಕೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 103.41 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ.94.67 ದಾಖಲಾಗಿದೆ. ರಾಷ್ಟ್ರ ವಾಣಿಜ್ಯ ನಗರಿ ಮುಂಬೈನಲ್ಲಿ ಲೀ. ಪೆಟ್ರೋಲ್ ದರ ರೂ. 118.41, ಡೀಸೆಲ್ ರೂ.102.64 ದಾಖಲಾಗಿದೆ.
ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 108.21 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 99.04 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್‌ಗೆ ಪೆಟ್ರೋಲ್ ಬೆಲೆ 113.03ರೂ ಹಾಗೂ ಡೀಸೆಲ್‍ಗೆ 97.02ರೂ. ದಾಖಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.








