ಭಾರತದಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ Petrol diesel saaksha tv
ನವದೆಹಲಿ : ಭಾರತದಲ್ಲಿ ಮತ್ತೆ ಇಂಧನ ಬೆಲೆ ಏರಿಯಾಗಿದೆ. ಇವತ್ತು ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ಸರಾಸರಿ 20 ರಿಂದ 30 ಪೈಸೆಯಷ್ಟು ಏರಿಕೆಯಾಗಿದೆ.
ಇದರೊಂದಿಗೆ ಸತತ ನಾಲ್ಕನೇ ದಿನವೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಯಾಗಿದೆ.
ಇಂದಿನ ಬೆಲೆ ಏರಿಕೆಯೊಂದಿಗೆ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 102.39ರೂ- ಡೀಸೆಲ್ ಬೆಲೆ 90.77ರೂ ಆಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.95ರೂ- ಡೀಸೆಲ್ ಬೆಲೆ 96.34ರೂರಷ್ಟಿದೆ.
ಇನ್ನು ಕೋಲ್ಕತಾದಲ್ಲಿ ಪೆಟ್ರೋಲ್ 103.07 ರೂ- ಡೀಸೆಲ್ 93.87ರೂ ಇದ್ದರೇ ಮುಂಬೈನಲ್ಲಿ ಪೆಟ್ರೋಲ್ 108.43ರೂ- ಡೀಸೆಲ್ 98.48ರೂ ಆಗಿದೆ.
ಅಂದಹಾಗೆ ಸೆಪ್ಟೆಂಬರ್ 5ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 15 ರಿಂದ 19 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ನಂತರ ಇಂಧನ ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇದೆ.









