ದೇಶ್ ವಾಸಿಯೋ ಮತ್ತೆ ಪೆಟ್ರೋಲ್ Petrol , ಡಿಸೇಲ್ ಬೆಲೆ ಏರಿಕೆ
ದೆಹಲಿ : ದೇಶದಲ್ಲಿ ಮತ್ತೆ ಇಂಧನದ ಬೆಲೆ ಏರಿಕೆಯಾಗಿದ್ದು, ಬುಧವಾರ, ಒಂದು ಲೀಟರ್ ಪೆಟ್ರೋಲ್ ಮೇಲೆ 26 ಪೈಸೆ ಮತ್ತು ಡೀಸೆಲ್ ಮೇಲೆ 13 ಪೈಸೆ ಹೆಚ್ಚಿಸಲಾಗಿದೆ.
ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆaಟ್ರೋಲ್ ಬೆಲೆ 96.66 ರೂಪಾಯಿ ಆಗಿದೆ.
ಇದು ನಿನ್ನೆಗೆ ಹೋಲಿಸಿದರೆ ಇಂದು 25 ಪೈಸೆ ಹೆಚ್ಚಾಗಿದೆ. ಒಂದು ಲೀಟರ್ ಡೀಸೆಲ್ ಬೆಲೆ 13 ಪೈಸೆ ಏರಿಕೆ ಕಂಡು 87.28 ರೂ ಆಗಿದೆ.
ಇನ್ನು ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ. 102.82 ಮತ್ತು ಡೀಸೆಲ್ ಲೀಟರ್‍ಗೆ 94.84 ರೂ. ಆಗಿದೆ.
ದೇಶದಲ್ಲಿ ಅತಿ ಹೆಚ್ಚು ಪೆಟ್ರೋಲ್ ಬೆಲೆ ರಾಜಸ್ಥಾನದ ಶ್ರೀ ಗಂಗನಗರ ಜಿಲ್ಲೆಯಲ್ಲಿ ರೂ. 107 ಆಗಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‍ಗೆ 100.51 ರೂ ಆಗಿದೆ.










