ಪ್ಯಾರೇ ದೇಶವಾಸಿಯೋ ಮತ್ತೆ ಪೆಟ್ರೋಲ್ ಬೆಲೆ ಏರಿಕೆ : ಬೆಂಗಳೂರಿನಲ್ಲಿ ಎಷ್ಟಿದೆ ದರ..?
ದೇಶದಲ್ಲಿ ಪೆಟ್ರೋಲ್ ಡೀಸೆಲ್ ದರವನ್ನ ತೈಲ ಕಂಪನಿಗಳು ಲಂಗು ಲಾಗಾಮಿಲ್ಲದಂತೆ ಏರಿಕೆ ಮಾಡ್ತಲೇ ಇದ್ದಾರೆ. ಇದ್ರಿಂದಾಗಿ ಸಮಾನ್ಯ ವರ್ಗದ ಜನರು ಪರದಾಡುವಂತಾಗಿದೆ. ಆದ್ರೂ ದರ ಏರಿಕೆ ಪರ್ವ ಮಾತ್ರ ನಿಲ್ಲುವಂತೆ ಕಾಣ್ತಿಲ್ಲ. ಇದೀಗ ಇಂದು ಮತ್ತೆ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗಿದೆ. ಅದೇ ಅಕ್ಟೋಬರ್ 2ರಂದು ಪೆಟ್ರೋಲ್ ದರ ಏರಿಕೆಯಾಗಿತ್ತು. ಬುಧವಾರ ಪೆಟ್ರೋಲ್ ಡೀಸೆಲ್ ದರ ಲೀಟರ್ ಗೆ 35 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಇಂಧನ ದರ ಈವರೆಗಿನ ಗರಿಷ್ಠ ಮಟ್ಟಕ್ಕೆ ತಲುಪಿದೆ.
ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ – 107. 94 ರೂಪಾಯಿಗೆ ತಲುಪಿದೆ. ಡೀಸೆಲ್ ದರ 96.67 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 113.80 ರೂಪಾಯಿ ಹಾಗೂ ಡೀಸೆಲ್ ದರ 104.75 ರೂಪಾಯಿ ಆಗಿದೆ. ಇನ್ನೂ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 111.70 ರೂಪಾಯಿ ಆಗಿದ್ರೆ ಡೀಸೆಲ್ ದರ 102.6 ರೂಪಾಯಿ ಆಗಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ದರವು 108.45 ಹಾಗೂ ಡೀಸೆಲ್ ದರ 99.78 ರೂಪಾಯಿಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 104.83 ಮತ್ತು ಡೀಸೆಲ್ ದರ 100.92 ರೂ. ಆಗಿದೆ.