ಸತತ 12 ನೇ ದಿನವೂ ಪೆಟ್ರೋಲ್ ಡೀಸೆಲ್ ದರ ಏರಿಕೆ : ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ..!
ನವದೆಹಲಿ: ಸತತ 12ನೇ ದಿನವೂ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗಿರುವುದು ದೇಶದ ಜನರಿಗೆ ಅದ್ರಲ್ಲೂ ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೇಶದಲ್ಲಿ ಸತತ 12ನೇ ದಿನವಾದ ಶನಿವಾರವೂ ತೈಲ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ 37 ಪೈಸೆಯಷ್ಟು ಏರಿಕೆಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಮನ ಹರಿಸದೇ ಇರುವುದರಿಂದ ಜನರು ಆಕ್ರೋಶಗೊಂಡಿದ್ದಾರೆ. ಆದರೂ ತೈಲ ಬೆಲೆ ಏರಿಕೆ ಕಡಿವಾಣ ಇಲ್ಲದಂತೆ ಮುನ್ನುಗ್ಗಲೇ ಇದೆ.
ಶನಿವಾರ ಲೀಟರ್ ಗೆ 37 ಪೈಸೆಯಷ್ಟು ಏರಿಕೆಯಾಗಿದ್ದರಿಂದ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 90.58 ರೂ. ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 80.97 ರೂ.ಗೆ ಏರಿಕೆಯಾಗಿದೆ.
ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!
ಬೆಂಗಳೂರಿನಲ್ಲಿ 1.30 ರೂ.ನಷ್ಟು ಏರಿಕೆ ಕಂಡಿದ್ದು, ಪೆಟ್ರೋಲ್ ಬೆಲೆ ಲೀಟರ್ ಗೆ 93.67ರೂ.ಗೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 85.84ರೂ.ಗೆ ಏರಿದೆ. ಮುಂಬೈನಲ್ಲಿ 97 ರೂ. ಡೀಸೆಲ್ 87.06 ರೂ.ಗೆ ಏರಿಕೆಯಾಗಿದೆ.
ಭೂಪಾಲ್- ಪೆಟ್ರೋಲ್ 98.60 ರೂ., ಡೀಸೆಲ್ 89.23 ರೂ.
ಜೈಪುರ – ಪೆಟ್ರೋಲ್ 97.10 ರೂ., ಡೀಸೆಲ್ 89.44 ರೂ.
ಪಾಟ್ನಾ- ಪೆಟ್ರೋಲ್ 92.91 ರೂ., ಡೀಸೆಲ್ 86.22 ರೂ.
ಚೆನ್ನೈ- ಪೆಟ್ರೋಲ್ 92.59 ರೂ., ಡೀಸೆಲ್ 85.98 ರೂ.
ಕೋಲ್ಕತ್ತಾ- ಪೆಟ್ರೋಲ್ 91.78 ರೂ., ಡೀಸೆಲ್ 84.56 ರೂ.
ಲಕ್ನೋ- ಪೆಟ್ರೋಲ್ 88.86 ರೂ., ಡೀಸೆಲ್ 81.35 ರೂ.
ನೋಯ್ಡಾ- ಪೆಟ್ರೋಲ್ 88.54 ರೂ., ಡೀಸೆಲ್ 80 ರೂ.
ಗುರುಗಾವ್ – ಪೆಟ್ರೋಲ್ 87.60 ರೂ., ಡೀಸೆಲ್ 78.60 ರೂ.
ರಾಂಚಿ- ಪೆಟ್ರೋಲ್ 88.08 ರೂ., ಡೀಸೆಲ್ 85.60 ರೂ.
ಡಾಲರ್ ಎದುರು ರೂಪಾಯಿ ಮೌಲ್ಯ 72.85 ರೂಪಾಯಿ ಇದೆ. ಬ್ರೆಂಟ್ ಕಚ್ಚಾ ತೈಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ಗೆ 60.60ನಂತೆ ಲಭ್ಯವಾಗುತ್ತಿದೆ. ಆದರೂ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ.
ವಿಶ್ವದ ಶಕ್ತಿಶಾಲಿ ಕರೆನ್ಸಿ ಯಾವುದು : ಅಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!
ಕಳೆದ 51 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 24 ಬಾರಿ ಹೆಚ್ಚಾಗಿದೆ. ಜನವರಿ 1ರಿಂದೀಚೆಗೆ 7.30 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ ತಿಂಗಳಲ್ಲಿ 14ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಕಳೆದ 12 ದಿನಗಳಿಂದ ನಿರಂತರವಾಗಿ ಬೆಲೆ ಏರಿಕೆ ಏರಿಸಿದ್ದು 12 ದಿನಗಳಿಂದ ಒಟ್ಟು 4.34 ಪೈಸೆ ಬೆಲೆ ಹೆಚ್ಚಳ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಇದೆ.