ದುನಿಯಾ ದುಬಾರಿ | 120 ರೂಪಾಯಿ ತಲುಪಿದ ಪೆಟ್ರೋಲ್ ಬೆಲೆ Petrol price saaksha tv
ಮುಂಬೈ : ದೇಶದಲ್ಲಿ ಬೆಲೆ ಏರಿಕೆಯ ಕಾಟ ಮುಂದುವರೆದಿದೆ.
ತೈಲ ಕಂಪನಿಗಳು ಇಂದೂ ಕೂಡ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಬೆಲೆ ಏರಿಕೆ ಮಾಡಿವೆ.
ಇವತ್ತು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೈಲ ಕಂಪನಿಗಳು ತಲಾ 35 ಪೈಸೆ ಹೆಚ್ಚಿಸಿವೆ.
ಇದರೊಂದಿಗೆ ದೇಶದಲ್ಲಿ ಇಂಧನ ದರ ದಾಖಲೆ ಮಟ್ಟ ತಲುಪಿದೆ.
ಇಂದಿನ ಬೆಲೆ ಏರಿಕೆಯೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಲೀಟರ್ ಪೆಟ್ರೋಲ್ ದರ 109.34 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ 98.07 ರೂ. ಇದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಬರೋಬ್ಬರಿ 113.15 ರೂ. ಹಾಗೂ ಡೀಸೆಲ್ ದರ 104.09 ರೂ.ಗೆ ಏರಿಕೆಯಾಗಿದೆ.
ಮಧ್ಯಪ್ರದೇಶದ ಅನೇಕ ನಗರಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 120 ರೂ. ಗಡಿ ದಾಟಿದೆ.