ಮೇ 4 ರಿಂದ 21ನೇ ಬಾರಿ ತೈಲ ಬೆಲೆ ಏರಿಕೆ : ಪೆಟ್ರೋಲ್ ದರ ದಾಖಲೆ ಮಟ್ಟಕ್ಕೆ..!
ಬೆಂಗಳೂರು : ಇಂದು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಮತ್ತೆ ತೈಲ ಬೆಲೆಯನ್ನು ಹೆಚ್ಚಿಸಿದ್ದು, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ದಾಖಲೆಯ ಮಟ್ಟವನ್ನು ತಲುಪಿದೆ.
ನವದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 28 ಪೈಸೆ ಏರಿಕೆಯಾಗಿ 95.31 ರೂ.ಗೆ ಏರಿದೆ. ಡೀಸೆಲ್ ದರ ಲೀಟರ್‍ಗೆ 27 ಪೈಸೆ ಹೆಚ್ಚಳದಿಂದ 86.22 ರೂಗಳಿಗೆ ಏರಿದೆ.
ಕೋಲ್ಕತ್ತಾದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 95.28 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್‍ಗೆ 89.07 ರೂ. ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 101.52 ರೂ. ಆಗಿದ್ದು ಡೀಸೆಲ್ ಪ್ರತಿ ಲೀಟರ್‍ಗೆ 93.98 ರೂ. ಚೆನ್ನೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 96.71 ರೂ., 1 ಲೀಟರ್ ಡೀಸೆಲ್ ಪ್ರತಿ ಲೀಟರ್‍ಗೆ 90.92 ರೂ.
ಮೇ 4 ರಿಂದ 21ನೇ ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ದೇಶದಲ್ಲಿ ಐತಿಹಾಸಿಕ ಹೆಚ್ಚಳ ಕಂಡಿದೆ.










