ಪೆಟ್ರೋಲ್ ಬೆಲೆ ಏರಿಕೆ | ಕೇಂದ್ರ ಸರ್ಕಾರಕ್ಕೆ ಸುಬ್ರಮಣಿಯನ್ ಚಾಟಿ
ನವದೆಹಲಿ : ದೇಶದಲ್ಲಿ ಕಳೆದ 18 ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2.65 ರೂ. ಏರಿಕೆ ಆಗಿದ್ದರೆ ಡೀಸೆಲ್ ಬೆಲೆ 3.41 ರೂ. ಏರಿಕೆಯಾಗಿದೆ.
ಈ ವಿಚಾರವಾಗಿ ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂ.ಗೆ ಮಾರಾಟ ಮಾಡುವುದು ಭಾರತ ಸರ್ಕಾರ ಜನರ ಮೇಲೆ ಮಾಡುತ್ತಿರುವ ಶೋಷಣೆ.
ಪೆಟ್ರೋಲ್ ರಿಫೈನರಿಗಳಲ್ಲಿ ಪ್ರತಿ ಲೀಟರ್ ಬೆಲೆ 30 ರೂ. ಆಗುತ್ತದೆ. ತೆರಿಗೆ ಮತ್ತು ಪೆಟ್ರೋಲ್ ಪಂಪ್ ಗಳ ಕಮಿಷನ್ ನಿಂದಾಗಿ ಉಳಿದ 60 ರೂ. ಹೆಚ್ಚಳವಾಗುತ್ತದೆ.
ನನ್ನ ದೃಷ್ಟಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಅನ್ನು ಗರಿಷ್ಟ 40 ರೂ.ಗೆ ಮಾರಾಟ ಮಾಡಬೇಕು ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಮುಳುಗುತ್ತಿರೋ ಹಡಗು, ಕಪ್ಪು-ಬಿಳಿ ಪಟ್ಟಿಯನ್ನಾದರೂ ಧರಿಸಲಿ: ಕೈ ವಿರುದ್ಧ ರಾಜಾಹುಲಿ ಕಿಡಿಕಿಡಿ
2018ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈಯಲ್ಲಿ ಪೆಟ್ರೋಲ್ ದರ 90 ರೂ. ಗಡಿ ದಾಟಿದೆ. ಔರಂಗಬಾದ್ 91.57 ರೂ., ಇಂದೋರ್ 91.58 ರೂ.ಗೆ ಏರಿಕೆಯಾಗಿದೆ.
ಸೋಮವಾರ ಒಂದು ಬ್ಯಾರಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 48.74 ಡಾಲರ್(3,600 ರೂ.) ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel