petromax
ಸ್ಯಾಂಡಲ್ ವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಚಿತ್ರೀಕರಣಕ್ಕೆ ದಿನಾಂಕ ನಿಗದಿಯಾಗಿದೆ.
‘ನೀರ್ ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ಮತ್ತು ನಟ ಸತೀಶ್ ನೀನಾಸಂ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ ಈ ಸಿನಿಮಾ ಸದ್ಯ ತನ್ನ ವಿಭಿನ್ನ ಟೈಟಲ್ ನಿಂದಲೇ ಅಭಿಮಾನಿಗಳಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದೆ.
ಪೆಟ್ರೋಮ್ಯಾಕ್ಸ್ ಚಿತ್ರದ ಶೂಟಿಂಗ್ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ.
‘ಜೇಮ್ಸ್’ ಗೆ ನಾಯಕಿ ಫಿಕ್ಸ್: ಮತ್ತೆ ಒಂದಾದ ‘ರಾಜಕುಮಾರ’ ಜೋಡಿ
ಇನ್ನೂ ಇದೆ ತಿಂಗಳ 19 ರಿಂದ ಶೂಟಿಂಗ್ ಶುರುವಾಗಲಿದೆ.
ವಿಜಯ್ ಪ್ರಸಾದ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾ ಈ ಹಿಂದೆಯೆ ಅನೌನ್ಸ್ ಆಗಿತ್ತು.
ಆದ್ರೆ ಸಿದ್ಲಿಂಗು ಸಿನಿಮಾ ರಿಲೀಸ್ ಆದ ಬಳಿಕ ಈ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಆ ವಿಚಾರ ಅಲ್ಲಿಗೆ ನಿಂತುಹೋಗಿತ್ತು.
ಇದಾದ ಬಳಿಕ ವಿಜಯ್ ಪ್ರಸಾದ್ ಪರಿಮಳ ಲಾಡ್ಜ್ ಸಿನಿಮಾ ಅನೌನ್ಸ್ ಮಾಡಿ, ಈಗಾಗಲೇ ಅಲ್ಲದೆ ಟೀಸರ್ ಸಹ ರಿಲೀಸ್ ಮಾಡಿದ್ದಾರೆ.
ಇದೀಗ ‘ಪರಿಮಳ ಲಾಡ್ಜ್’ ಟೇಕಾಫ್ ಆಗುವ ಮುನ್ನವೇ ಪೆಟ್ರೇಮ್ಯಾಕ್ಸ್ ಸಿನಿಮಾ ಪ್ರಾರಂಭಿಸಿದ್ದಾರೆ ನಿರ್ದೇಶಕರು.
ಉಳಿದಂತೆ ಚಿತ್ರದ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಕಾಡಿದೆ.
ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಸನ್ನಿ..!
ಈ ಹಿಂದೆ ಈ ಚಿತ್ರಕ್ಕೆ ಅದಿತಿ ಪ್ರಭುದೇವ್ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು.
ಆದರೆ ಬಳಿಕ ಅವರು ಚಿತ್ರದ ಭಾಗವೆಲ್ಲ ಎಂಬುದು ತಿಳಿದುಬಂದಿತ್ತು.
petromax
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel