PFI ಬ್ಯಾನ್ ಬೆನ್ನಲ್ಲೆ ಕರ್ನಾಟಕಕ್ಕೆ ಗುಪ್ತಚರ ಇಲಾಖೆ ಮಹತ್ವದ ಸೂಚನೆ
ಬೆಂಗಳೂರು : ಕೇಂದ್ರ ಸರ್ಕಾರ ದೇಶದಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಇದರ ಬೆನ್ನಲ್ಲೆ ಕೇಂದ್ರ ಗುಪ್ತಚರ ಇಲಾಖೆ ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ರೆಡ್ ಅಲರ್ಟ್ ಸೂಚನೆ ನೀಡಿದೆ.
ಪಿಎಫ್ ಐ ಪ್ರಬಲವಾಗಿರುವ ರಾಜ್ಯಗಳಿಗೆ ಗುಪ್ತಚರ ಇಲಾಖೆ ರೆಡ್ ಅಲರ್ಟ್ ಮೆಸೇಜ್ ಕಳುಹಿಸಿದೆ.
ಗುಪ್ತಚರ ಇಲಾಖೆ ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣಕ್ಕೆ ರೆಡ್ ಅಲರ್ಟ್ ನೀಡಿದೆ.
ಯಾವುದೇ ಕಾರಣಕ್ಕೂ ಪ್ರತಿಭಟನೆಗಳಿಗೆ ಅವಕಾಶ ನೀಡಬೇಡಿ ಎಂದು ಈ ಆರು ರಾಜ್ಯಗಳಿಗೆ ಗುಪ್ತಚರ ಇಲಾಖೆ ಸೂಚನೆ ನೀಡಿದೆ.
PFI Ban | ಕರ್ನಾಟಕಕ್ಕೆ ಗುಪ್ತಚರ ಇಲಾಖೆ ಮಹತ್ವದ ಸೂಚನೆ