PFI Ban | ಪಿಎಫ್ ಐ ರಣಬೇಟೆಗೆ ಕಾರಣಗಳೇನು ?
ಬೆಂಗಳೂರು : ಕೇಂದ್ರ ಸರ್ಕಾರ ದೇಶದಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ನಿಷೇಧವಾದ ಸಂಘಟನೆಗಳು : ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆಯ ಅಡಿ ಪಿಎಫ್ ಐ, ರಿಹಬ್ ಇಂಡಿಯಾ ಫೌಂಡೇಷನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಪೆಡರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳ ಸಂಘಗಳನ್ನು ನಿಷೇಧ ಮಾಡಲಾಗಿದೆ.
ಪಿಎಫ್ ಐ ಬ್ಯಾನ್ ಗೆ ಕಾರಣಗಳೇನು ?
ನವರಾತ್ರಿ, ದಸರಾ ವೇಳೆ ದೇಶದಾದ್ಯಂತ ವಿಧ್ವಂಸಕ ಕೃತ್ಯಗಳಿಗೆ ಸಂಚು
ಕ್ರಿಮಿನಲ್, ಭಯೋತ್ಪಾದನಾ ಕೃತ್ಯಗಳಲ್ಲಿ ಪಿಎಫ್ ಐ ಭಾಗಿ.
ದೇಶದ ಸಂವಿಧಾನಿಕ ಹುದ್ದೆಗಳಿಗೆ ಅಗೌರವ ತೋರಿದೆ.
ವಿದೇಶಗಳಿಂದ ಫಂಡ್, ದೇಶದ ಆಂತರಿಕ ಭದ್ರತೆಗೆ ದೊಡ್ಡ ಬೆದರಿಕೆ

ಪ್ರಕರಣಗಳ ತನಿಖೆ ವೇಳೆ ಪಿಎಫ್ ಐ ಹಿಂಸಾತ್ಮಕ, ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿ ( ಪ್ರೊಫೆಸರ್ ಕೈ ಕತ್ತರಿಸಿದ್ದು, ಕೋಲ್ಡ್ ಬ್ಲಡ್ ಹತ್ಯ)
ಭಯೋತ್ಪದನಾ ಕೃತ್ಯಗಳಲ್ಲಿ ಪಿಎಫ್ ಐ ಕೇಡರ್ ಭಾಗಿ ( ಕರ್ನಾಟಕದಲ್ಲಿ ಮೂವರನ್ನ ಹತ್ಯೆ ಮಾಡಿದ ಉಲ್ಲೇಖ )
ಪಿಎಫ್ ಐ ಸಂಘಟನೆಗೆ ಜಾಗತಿಕ ಭಯೋತ್ಪಾದನಾ ಸಂಘಟನೆಗಳ ಜೊತೆಗೆ ಲಿಂಕ್
ಪಿಎಫ್ ಐ ಕೆಲ ಕಾರ್ಯಕರ್ತರು ಐಸಿಎಸ್ ಸೇರ್ಪಡೆ
ಪಿಎಫ್ ಐ ಪರವಾಗಿ ಹಣ ಠೇವಣಿ ಇಟ್ಟವರ ಹಣಕಾಸು ಪ್ರೊಫೈಲ್ ಪೂರಕವಾಗಿಲ್ಲ.
ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಪಿಎಫ್ ಐ ಬ್ಯಾನ್ ಗೆ ಶಿಫಾರಸು








