ಚಿಕ್ಕಮಗಳೂರು: ಪಿಎಫ್ಐ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ರ ಕಚೇರಿ ಮೇಲೆ ಪಿಎಫ್ಐ ಕಾರ್ಯಕರ್ತರು ಮುತ್ತಿಗೆ ಹಾಕಿದ್ದನ್ನು ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಪಿಎಫ್ಐ ಬಾಲ ಬಿಚ್ಚಿದರೆ ಬಾಲನೂ ಕಟ್, ತಲೆನೂ ಕಟ್ ಎಂದು ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ ರವಿ, ಇಡಿ ತನಿಖೆ ಮಾಡುವುದು ಬೇಡ ಎನ್ನಲು ಪಿಎಫ್ಐ ಯಾರು, ಭಾರತ ಇರುವುದು ಭಯೋತ್ಪಾದನೆ ಮಾಡಲು ಅಲ್ಲ. ಭಯೋತ್ಪಾದನೆಗೆ ವಿದೇಶದಿಂದ ಹಣ ಬರುವುದನ್ನು ತಡೆಯಲು ತನಿಖೆ ನಡೆಯಬೇಕಿದೆ ಎಂದರು.
ಬೇಕಾದ್ದನ್ನು ಮಾಡಬೇಕೆನ್ನುವವರು ಪಾಕಿಸ್ತಾನಕ್ಕೆ ಹೋಗಲಿ
ಅಕ್ರಮ ಹಣ ವರ್ಗಾವಣೆ ಮಾಡಬಹುದು, ಬೇಕಾದ್ದನ್ನೆಲ್ಲ ಮಾಡಬಹುದು ಎನ್ನುವುದಕ್ಕೆ ಭಾರತಕ್ಕೊಂದು ಸಂವಿಧಾನವಿದೆ-ಕಾನೂನಿದೆ. ಬೇಕಾದ್ದನ್ನೆಲ್ಲಾ ಮಾಡಿ ಬದುಕುವುದಕ್ಕೆ ಇದು ಪಾಕಿಸ್ತಾನವಲ್ಲ. ಈ ನೆಲದ ಕಾನೂನು, ಈ ನೆಲದ ಸಂವಿಧಾನ ಗೌರವಿಸಬೇಕು. ಅದಕ್ಕೆ ತಕ್ಕಂತೆ ಇದ್ದರೆ ಮಾತ್ರ ಈ ದೇಶದಲ್ಲಿ ಇರಲಿ. ಇಲ್ಲದೇ ಇದ್ದರೆ ಅವರಿಗೇ ಅಂತ ಕೊಟ್ಟಿರುವ ಪಾಕಿಸ್ತಾನ ಇದೆ. ಹೇಗೆ ಬೇಕಾದರೂ ಇರುತ್ತೇವೆ ಎನ್ನುವುದಕ್ಕೆ ಇದು ಪಾಕಿಸ್ತಾನ ಅಲ್ಲ. ಭಾರತದ ನೆಲದಲ್ಲಿ ಬದುಕಲು ಅವಕಾಶವೂ ಇಲ್ಲ.
ನಾವು ಹೇಗೆ ಬೇಕಾದರೂ ಇರುತ್ತೇವೆ, ಭಯೋತ್ಪಾದನೆ ಮಾಡುತ್ತೇವೆ. ಯಾರೂ ಕೇಳಬಾರದು ಎಂದು ದುರ್ವರ್ತನೆ ತೋರಿದರೆ ಬರೀ ಬಾಲ ಕಟ್ ಅಲ್ಲ, ಅಂತಹ ಮಾನಸಿಕತೆಯ ತಲೆಯನ್ನೂ ಕಟ್ ಮಾಡಬೇಕಾಗುತ್ತದೆ ಎಂದು ಎಂದು ಸಿ.ಟಿ ರವಿ ಎಚ್ಚರಿಕೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel