ಫಿಲಿಫೈನ್ಸ್ : ಸೇನಾ ವಿಮಾನ ಅಪಘಾತ – ಸಾವಿನ ಸಂಖ್ಯೆ 50ಕ್ಕೆ ಏರಿಕೆ
ಫಿಲಿಫೈನ್ಸ್ : ಫಿಲಿಫೈನ್ಸ್ ನಲ್ಲಿ ಭಾನುವಾರ ಸಂಭವಿಸಿದ ಸೇನಾ ವಿಮಾನದ ಅಪಘಾತದಲ್ಲಿ ಒಟ್ಟು ಸಾವಿನ ಸಂಖ್ಯೆ 50ಕ್ಕೆ ಏರಿದೆ. ಸುಲು ಪ್ರಾಂತ್ಯದ ಜುಲು ವಿಮಾನ ನಿಲ್ದಾಣದಲ್ಲಿ ರನ್ವೇಯಲ್ಲಿ ಇಳಿಯಲು ಸಾಧ್ಯವಾಗದೆ ವಿಮಾನವು ಅಪಘಾತಕ್ಕೀಡಾಗಿತ್ತು.
‘ಲಾಕ್ ಹೀದ್ ಸಿ-130 ಹೆರ್ಕ್ಯೂಲೆಸ್’ ಸೇನಾ ವಿಮಾನದಲ್ಲಿ 96 ಯೋಧರು ಪ್ರಯಾಣಿಸುತ್ತಿದ್ದರು. 49 ಯೋಧರನ್ನು ಪೊಲೀಸರು, ಅಗ್ನಿಶಾಮಕದ ದಳ ಹಾಗೂ ಸೇನಾ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
ವಿಮಾನದಲ್ಲಿದ್ದ ಬಹುತೇಕ ಯೋಧರು ಹೊಸದಾಗಿ ನೇಮಕಗೊಂಡು ತರಬೇತಿ ಪಡೆದಿದ್ದರು. ಈ ಯೋಧರನ್ನು ಅಬು ಸಯ್ಯಫ್ ಉಗ್ರರ ವಿರುದ್ಧ ಹೋರಾಟಕ್ಕೆ ನಿಯೋಜಿಸಲು ಉದ್ದೇಶಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿದ್ದ ಏಳು ಮಂದಿಗೂ ವಿಮಾನ ಡಿಕ್ಕಿಯಾಗಿತ್ತು. ಇವರಲ್ಲಿ ಮೂವರು ಸಾವಿಗೀಡಾಗಿದ್ದಾರೆ.
ವಿಮಾನ ಅಪಘಾತಕ್ಕೆ ಖಚಿತ ಕಾರಣಗಳು ತಿಳಿದು ಬಂದಿಲ್ಲ. ರನ್ ವೇಯಿಂದ ಹೊರಹೋದ ವಿಮಾನವು ಮತ್ತೆ ಅದೇ ಮಾರ್ಗಕ್ಕೆ ಮರಳಲು ಯತ್ನಿಸಿದ ವೇಳೆ ಸಾಧ್ಯವಾಗದೇ ಅಪಗಾತಕ್ಕೆ ಈಡಾಗಿದೆ.. ಇನ್ನೂ ನೆರವು ನೀಡುವ ಒಪ್ಪಂದದ ಅನ್ವಯ ಅಮೆರಿಕ ವಾಯು ಪಡೆಯ ಈ ಯುದ್ಧ ವಿಮಾನವನ್ನು ಫಿಲಿಫೈನ್ಸ್ ಗೆ ಇದೇ ವರ್ಷ ಹಸ್ತಾಂತರಿಸಲಾಗಿತ್ತು.