ಮಾಸ್ಕ್ ಗಳಿಲ್ಲದೆ, ಸಾಮಾಜಿಕ ಅಂತರವಿಲ್ಲದೆ ಸಹಜ ಸ್ಥಿತಿಯನ್ನು ಸಂಭ್ರಮಿಸುತ್ತಿರುವ ವುಹಾನ್ ಜನರ ಪೋಟೋ ಗಳು ವೈರಲ್
ವುಹಾನ್, ಸೆಪ್ಟೆಂಬರ್22: ಪ್ರಪಂಚದಾದ್ಯಂತ ರಾಷ್ಟ್ರಗಳು ಇನ್ನೂ ಕೋವಿಡ್-19 ವಿರುದ್ಧ ಹೋರಾಡುತ್ತಿರುವಾಗ, ಕೊರೋನಾ ಸೋಂಕಿನ ಕೇಂದ್ರ ಚೀನಾದ ವುಹಾನ್ ಸಹಜ ಸ್ಥಿತಿಗೆ ಮರಳಿದೆ. ಕಳೆದ ತಿಂಗಳು ನಗರದಲ್ಲಿ ಪೂಲ್ ಪಾರ್ಟಿಯ ಚಿತ್ರಗಳು ವೈರಲ್ ಆದ ನಂತರ, ನಿಯಮಿತ ನೈಟ್ಕ್ಲಬ್ ಪಾರ್ಟಿ ಪುನರಾರಂಭವಾಗಿದೆ ಎಂದು ಹೊಸ ವರದಿಗಳು ತಿಳಿಸಿವೆ. ನಗರದಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗದ ನಂತರ ನೈಟ್ಕ್ಲಬ್ಗಳು ತಮ್ಮ ಡ್ಯಾನ್ಸ್ಫ್ಲೋರ್ ಅನ್ನು ಮತ್ತೆ ತೆರೆದಿದ್ದಾರೆ. ಯಾವುದೇ ಮಾಸ್ಕ್ ಗಳಿಲ್ಲದೆ ಮತ್ತು ಯಾವುದೇ ಸಾಮಾಜಿಕ ಅಂತರವಿಲ್ಲದೆ, ಲಾಕ್ಡೌನ್ ನಂತರದ ತಿಂಗಳುಗಳನ್ನು ಸಂಭ್ರಮಿಸುತ್ತಿದ್ದಾರೆ. ಕಿಕ್ಕಿರಿದ ನೈಟ್ಕ್ಲಬ್ಗಳಿಂದ ಕೆಲವು ಚಿತ್ರಗಳನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳಲಾಗಿದೆ. ಸಿಂಪ್ಸನ್ಸ್ ವುಹಾನ್ ಪೂಲ್ ಪಾರ್ಟಿಯನ್ನು ಆಯೋಜಿಸಿದೆ.
ವರದಿಗಳ ಪ್ರಕಾರ, ಚೀನಾ ಸರ್ಕಾರ ತಾನು ಕೋವಿಡ್-19 ವೈರಸ್ ಅನ್ನು ನಾಶಗೊಳಿಸುವುದರಲ್ಲಿ ಜಯಶಾಲಿಯಾಗಿದ್ದು, 33 ದಿನಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದೆ.
ಸೆಪ್ಟೆಂಬರ್ನಿಂದ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಸಹ ಪ್ರಾರಂಭವಾಗಿವೆ. ಅಷ್ಟೇ ಅಲ್ಲ ಈಗ ನೈಟ್ಕ್ಲಬ್ ಪಾರ್ಟಿಗಳು ಕೂಡ ಮರಳಿದೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿರುವ ಹಿನ್ನೆಲೆಯಲ್ಲಿ ಜನರು ಕ್ಲಬ್ನಲ್ಲಿ ಒಟ್ಟಿಗೆ ನೃತ್ಯ ಮಾಡುವುದು, ಒಟ್ಟಿಗೆ ಸಮಯ ಕಳೆಯುವುದು ಮಾಡುತ್ತಿದ್ದಾರೆ. ನೈಟ್ಕ್ಲಬ್ನ ಕೆಲವು ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು, ಅವು ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತದೆ.
ಏತನ್ಮಧ್ಯೆ, ಜಗತ್ತು ಇನ್ನೂ ಕೊರೋನವೈರಸ್ ನೊಂದಿಗೆ ಹೋರಾಡುತ್ತಿದೆ. ಕೆಲವು ದೇಶಗಳಲ್ಲಿ ಎರಡನೇ ಅಲೆ ವರದಿಯಾಗಿದೆ. ಅಮೆರಿಕ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಇತರ ದೇಶಗಳಿಗೆ ಹೋಲಿಸಿದರೆ, ಚೀನಾ 42 ನೇ ಸ್ಥಾನದಲ್ಲಿದೆ. ವರದಿಗಳ ಪ್ರಕಾರ, ನಗರದ ಸಂಪೂರ್ಣ 11 ದಶಲಕ್ಷ ಜನಸಂಖ್ಯೆಗಾಗಿ ವುಹಾನ್ನಲ್ಲಿ ಸಾಮೂಹಿಕ ಪರೀಕ್ಷೆ ನಡೆಸಿದೆ ಎಂದು ಚೀನಾ ಹೇಳಿಕೊಂಡಿದೆ.