ಚಲಿಸುತ್ತಿದ್ದ ರೈಲಿನ ಮುಂದೆ ಮಹಿಳೆಯನ್ನ ತಳ್ಳಿದ ಸೈಕೋ…. ತನ್ನನ್ನ ತಾವು ದೇವರೆಂದ..!!!! VIDEO
ನ್ಯೂಯಾರ್ಕ್ : ಸೈಕೋ ವ್ಯಕ್ತಿಯೊಬ್ಬ ಮಹಿಳೆಯನ್ನ ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ತಳ್ಳಿದ್ದಾನೆ.. ಆದ್ರೆ ಅದೃಷ್ಟಕ್ಕೆ ಆ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು , ಆತನನ್ನ ಹಿಡಿದು ವಿಚಾರಣೆ ನಡೆಸಿದಾಗ ಆ ವ್ಯಕ್ತಿ ತನನ್ನ ತಾನು ದೇವರು ಎಂದು ಹೇಳಿಕೊಂಡಿದ್ದಾಂತೆ.. ಇಂತಹದೊಂದು ವಿಲಕ್ಷಣ ಘಟನೆ ನಡೆದಿರೋದು ನ್ಯೂಯಾರ್ಕ್ನ ಟೈಮ್ಸ್ ಮೆಟ್ರೋ ಸ್ಕ್ವೇರ್ ಸುರಂಗಮಾರ್ಗದ ಬಳಿ..
ಮೆಟ್ರೋ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಎದುರು 40 ವರ್ಷದ ಏಷ್ಯ ಮೂಲದ ಮಹಿಳೆಯನ್ನು ಸೈಮನ್ ಮಾರ್ಷಲ್ ಎಂಬ ವ್ಯಕ್ತಿ ತಳ್ಳಿದ್ದ. ಇದರಿಂದ ಮಹಿಳೆ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಳು.
ಕೊಲೆಯ ಸ್ಥಳದಿಂದ ವ್ಯಕ್ತಿ ಪಲಾಯನ ಮಾಡಿದ ಒಂದು ಗಂಟೆಯ ನಂತರ ಪೊಲೀಸರು ಆತನನ್ನು ಬಂಧಿಸಿದ್ದರು. ವರದಿಗಳ ಪ್ರಕಾರ ಆರೋಪಿ, ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಆತ ದರೋಡೆ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಎನ್ನಲಾಗಿದೆ. ನಂತರ 2021ರ ಆಗಸ್ಟ್ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಪ್ರಶ್ನಿಸಿದಾಗ ಆತ ನಾನು ದೇವರು. ನಾನು ಇದನ್ನು ಮಾಡಬಹುದು ಎಂದು ಉತ್ತರಿಸಿರೋದಾಗಿ ವರದಿಯಾಗಿದೆ..
(⚠️Vidéo choc)
Tentative de meurtre dans la station de métro Rogier à Bruxelles ce vendredi vers 19h40. pic.twitter.com/dT0ag5qEFu— Infos Bruxelles🇧🇪 (@Bruxelles_City) January 14, 2022