ಮಾಲೀಕನ ಮನೆಯಲ್ಲಿ ಚಿನ್ನ ಕಳುವು : ಮಹಿಳೆಗೆ ದೈಹಿಕ ಹಿಂಸೆ ಕೊಟ್ಟ ಪೊಲೀಸರು..!
ಮೈಸೂರು : ಮನೆ ಕೆಲಸದ ಮಹಿಳೆಯ ವಿರುದ್ಧ ಕಳ್ಳತನ ಆರೋಪ ಮಾಡಲಾದ ಹಿನ್ನೆಲೆ ಆಕೆಯನ್ನ ಠಾಣೆಗೆ ಎಳೆತಂದ ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ. ಮೈ ಕೈ ಊಟ ಬರುವಂತೆ ಠಾಣೆಯಲ್ಲಿ ಆಕೆ ಮೇಲೆ ಪೊಲೀಸರು ಮನಬಂದಂತೆ ಥಳಿಸಿದ್ದಾರೆಂದು ಸ್ವತಃ ನೊಂದ ಮಹಿಳೆಯೇ ಹೇಳಿಕೊಂಡು ಜಣ್ಣೀರಿಟ್ಟಿದ್ದಾರೆ. ಅದು ಅಲ್ದೇ ಮಹಿಳೆ ಮೇಲೆ ಪುರುಷ ಪೊಲೀಸರು ಕಾನೂನಿನ ನಿಯಮವನ್ನ ಮೀರಿ ಥಳಿಸಿದ್ದಾಗಿ ಮಹಿಳೆ ಆರೋಪ ಮಾಡಿದ್ದಾರೆ.
ನಮ್ಮ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರ ಅಲ್ಲಾ – ರಾಮುಲು..!
ವಿಜಯನಗರ ಪೊಲೀಸರ ವಿರುದ್ಧ ಲಕ್ಷ್ಮಿ ಎಂಬಾಕೆ ಈ ಆರೋಪ ಮಾಡಿದ್ದಾರೆ. ಹಿನಕಲ್‌ನ ಸೌಪರ್ಣಿಕಾ ಅಪಾರ್ಟ್‌ಮೆಂಟ್‌ನಲ್ಲಿ ಲಕ್ಷ್ಮಿ ಕೆಲಸ ಮಾಡುತ್ತಿದ್ದರು. 15 ದಿನಗಳ ಹಿಂದೆ ಮಾಲಿಕರಾದ ಸುನಿತಾ ಕೃಷ್ಣಪ್ಪ ಮನೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸುನಿತಾ ಮನೆಯಲ್ಲಿದ್ದ 75 ಗ್ರಾಂ ಚಿನ್ನ ಕಾಣೆಯಾಗಿದೆ. ಇದೇ ಹಿನ್ನೆಲೆ ವಿಜಯನಗರ ಪೊಲೀಸರಿಗೆ ಮಾಲೀಕರು ದೂರು ನೀಡಿದ್ದ ಬೆನ್ನಲ್ಲೇ, ಲಕ್ಷ್ಮಿಯನ್ನ ಠಾಣೆಗೆ ಎಳೆದೊಯ್ದಿರುವ ಪೊಲೀಸರು ವಿಚಾರಣೆ ಹೆಸರಿನಲ್ಲಿ ದೈಹಿಕ ಹಲ್ಲೆ ಮಾಡಿರುವ ಆರೋಪವನ್ನ ಹೊರಿಸಲಾಗಿದೆ. ಅಲ್ದೇ 75 ಗ್ರಾಂ ಚಿನ್ನ ಇಲ್ಲ 4 ಲಕ್ಷ ಹಣ ಕೊಡುವಂತೆ ಹಿಂಸೆ ಕೊಟ್ಟಿದ್ದಾರೆ. ನಾನು ಕೂಲಿ ಮಾಡೋದು ಅಷ್ಟೋಂದು ಹಣವನ್ನ ಎಲ್ಲಿಂದ ತರಲಿ ಎಂದು ಮಹಿಳೆ ಕಣ್ಣೀರಾಕುತ್ತಿದ್ದಾರೆ.
‘ಸೈನೈಡ್ ಮಲ್ಲಿಕಾ’ ಮೀಟ್ಸ್ ‘ ಸೈನೈಡ್ ಮೋಹನ್’ ತೆರೆಗೆ ಬರಲು ರೆಡಿಯಾಗ್ತಿದೆ ಕ್ರೈಂ ಸ್ಟೋರಿ!
ಸಿದ್ದರಾಮಯ್ಯ ಟ್ರಂಪ್ ಇದ್ದಂತೆ : ಹೆಚ್.ವಿಶ್ವನಾಥ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel