ಚಿರತೆಯನ್ನು ಬೇಟೆಯಾಡಿದ ಹಂದಿಗಳು
ಚಾಮರಾಜನಗರ: ಚಿರತೆಯೊಂದನ್ನು ಕಾಡುಹಂದಿಗಳು ಎಳೆದಾಡಿ ತಿಂದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳುನಾಡಿನ ಪಳನಿ-ಕೊಡೈಕೆನಾಲ್ ರಸ್ತೆಯಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದ ಚಿರತೆಯನ್ನು ಮೂರು ಕಾಡುಹಂದಿಗಳು ನಡುರಸ್ತೆಯಲ್ಲಿ ಎಳೆದಾಡಿ ತಿನ್ನುತ್ತಿದ್ದವು. ಇದನ್ನು ಕಂಡ ವಾಹನ ಸಾವಾರರು ಬೆಚ್ಚಿಬಿದ್ದಿದ್ದಾರೆ.
ಈ ದೃಶ್ಯವನ್ನು ಪ್ರಖ್ಯಾತ ಪತ್ರಕರ್ತೆ ಬೊಸ್ಕಿ ಖನ್ನಾ ಅವರು ಚಿತ್ರಿಕರಿಸಿ ಆಸನೂರು-ಕೊಳ್ಳೇಗಾಲ ರಸ್ತೆಯಲ್ಲಿ ನಡೆದಿದೆ ಎಂದು ರಾಜ್ಯದ ಅರಣ್ಯ ಇಲಾಖೆ ಅರಣ್ಯಾಧಿಕಾರಿಗಾಳನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಪಳನಿ ರಸ್ತೆಯಲ್ಲಿ ನಡೆದಿದೆ ಎಂದು ಶೇರ್ ಮಾಡಲಾಗುತ್ತಿದೆ.