ನೇಪಾಳದಲ್ಲಿ ವಿಮಾನ ನಾಪತ್ತೆ – 22 ಮಂದಿ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಕಣ್ಮರೆ…
ನಾಲ್ವರು ಭಾರತೀಯರು ಸೇರಿದಂತೆ 22 ಜನ ಪ್ರಯಾಣಿಸುತ್ತಿದ್ದ ನೇಪಾಳದ ಖಾಸಗಿ ವಿಮಾನ ನಾಪತ್ತೆಯಾಗಿದೆ. ನೇಪಾಳದ ಖಾಸಗಿ ಸಂಸ್ಥೆ ನಿರ್ವಹಿಸುತ್ತಿದ್ದ ಸಣ್ಣ ವಿಮಾನ ನಾಪತ್ತೆಯಾಗಿದೆ ಎಂದು ಅಲ್ಲಿನ ಜಿಲ್ಲಾಧೀಕಾರಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ವಿಮಾನವು ಭಾನುವಾರ ಬೆಳಗ್ಗೆ 9.55ಕ್ಕೆ ಪೋಕ್ರಾದಿಂದ ಹೊರಟಿದ್ದ ವಿಮಾನ ನಾಪತ್ತೆಯಾಗಿದೆ. ವಿಮಾನವು ಮುಸ್ತಂಗ್ ನ ಲೆಟೆಗೆ ಟೇಕ್ ಆಫ್ ಆಗಿತ್ತು. ಜಾಮ್‌ಸೋನ್ ಎಂಬ ಪ್ರದೇಶಕ್ಕೆ ತಲುಪಬೇಕಿತ್ತು. ಆದರೆ ಮಾರ್ಗ ಮಧ್ಯೆ ವಿಮಾನದ ಸಂಪರ್ಕ ಕಡಿತಗೊಂಡಿದ್ದು, ವಿಮಾನ ಅಪಘಾತಕ್ಕೀಡಾರುವ ಶಂಕೆ ಆರಂಭವಾಗಿದೆ.
ನಾಪತ್ತೆಯಾಗಿರುವ ವಿಮಾನದಲ್ಲಿ ನಾಲ್ವರು ಭಾರತೀಯರು ಹಾಗೂ ಮೂವರು ಜಪಾನ್ ಪ್ರಜೆಗಳಿದ್ದರು. ಉಳಿದ ಎಲ್ಲಾ ಪ್ರಯಾಣಿಕರು ನೇಪಾಳದ ಪ್ರಜೆಗಳು ಎಂದು ವರದಿಗಳು ತಿಳಿಸಿವೆ. ನೇಪಾಳ ರಾಜಧಾನಿ ಕಟ್ಮಂಡುವಿನಿಂದ 200 ಕಿ. ಮೀ. ದೂರದಲ್ಲಿ ವಿಮಾನ ನಾಪತ್ತೆಯಾಗಿದೆ.
Plane with 22 onboard including 4 Indians goes missing in Nepal








