ಕೋವಿಡ್ ಸಂಕಷ್ಟ : ಆಗಸ್ಟ್ 21ರವರೆಗೆ ಭಾರತದ ವಿಮಾನಗಳ ಮೇಲೆ ನಿಷೇಧ ಹೇರಿದ ಕೆನಡಾ
ಕೆನಡಾ : ಭಾರತದಲ್ಲಿ ಕೋವಿಡ್ 2ನೇ ಅಲೆ ಕಡಿಮೆಯಾಗಗಿದ್ರೂ , 3ನೇ ಅಲೆಯ ಆತಂಕ , ಡೆಲ್ಟಾ ಪ್ಲಸ್ ಹಾವಳಿ ಹಿನ್ನೆಲೆ ಭಾರತದಿಂದ ಕೆನಡಾ ತೆರಳುವ ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು 2021ರ ಆಗಸ್ಟ್ 21ರವರೆಗೆ ನಿಷೇಧಿಸಲಾಗಿದೆ. ಈ ಬಗ್ಗೆ ಕೆನಡಾ ಸರ್ಕಾರ ಮಂಗಳವಾರ ಘೋಷಿಸಿದೆ. ಇದು ನಿಯಮ ಪರವಾನಗಿ ಹೊಂದಿರುವ ಕಾರ್ಮಿಕರು, ವಿದೇಶಿ ವಿದ್ಯಾರ್ಥಿಗಳು ಮತ್ತು ಮೂಲ ನಿವಾಸಿಗಳಿಗೂ ಅನ್ವಯಿಸಲಾಗಿದೆ.
ಭಾರತ ಮತ್ತು ಕೆನಡಾ ನಡುವಿನ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಪುನಾರಂಭಿಸಲು ಇತ್ತೀಚೆಗಷ್ಟೇ ಕೆನಡಾ ಹಾಗೂ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾ ಏರ್ ಇಂಡಿಯಾ ಟೊರೊಂಟೊ ಪ್ರತಿನಿಧಿಯನ್ನು ಭೇಟಿ ಮಾಡಿದ್ದರು. ಜೊತೆಗೆ ಉಭಯ ರಾಷ್ಟ್ರಗಳ ನಡುವೆ ವಿಮಾನಯಾನಗಳನ್ನು ಪುನಾರಂಭಿಸುವುದು ಮುಖ್ಯವಾಗಿದೆ. ಅದರಲ್ಲಿಯೂ ಕಾಲೇಜುಗಳನ್ನು ಪುನಃ ತೆರೆಯುವ ದೃಷ್ಟಿಯಿಂದ ವಿಮಾನ ಹಾರಾಟವನ್ನು ಪ್ರಾರಂಭಿಸಬೇಕು ಎಂದು ಹೇಳಿದ್ದರು. ಆದ್ರೆ ಭಾರತ ಹೊರತುಪಡಿಸಿ ಉಳಿದ ಎಲ್ಲಾ ಅಂತರಾಷ್ಟ್ರಿಯ ಪ್ರಯಾಣಿಕರು ಲಸಿಕೆ ಪಡೆದು ಕೆನಾಡ ಪ್ರವೇಶಕ್ಕೆ ಆಗಮಿಸಲು ಅನುಮತಿ ನೀಡಲಾಗಿದೆ.
ಪೆಗಾಸಸ್ ಬೇಹುಗಾರಿಕಾ ಸಾಫ್ಟ್ ವೇರ್ – ಜಗತ್ತಿನಾದ್ಯಂತ 50 ಸಾವಿರಕ್ಕೂ ಅಧಿಕಮೊಬೈಲ್ ಮಾಹಿತಿ ಕಳವು..!
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 30,093 ಹೊಸ ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 374 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,11,74,322ಕ್ಕೆ ತಲುಪಿದ್ದು, ಸಾವಿನ 4,14,482ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 45,254 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 3,03,53,710ಕ್ಕೆ ತಲುಪಿದೆ. ದೇಶದಲ್ಲಿ ಗುಣಮುಖರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 4,06,130ಕ್ಕೆ ಕುಸಿದಿದೆ.