ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದರ ಮಧ್ಯೆ ರಾಜ್ಯದಲ್ಲಿ ಇಂದಿನಿಂದ ಕೊರೊನಾ ಸೋಂಕಿತ ರೋಗಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಪ್ಲಾಸ್ಮಾ ಥೆರಪಿಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಪ್ಲಾಸ್ಮಾ ಚಿಕಿತ್ಸೆಗೆ ಇಂದು ಚಾಲನೆ
ಕೋವಿಡ್19 ಸೋಂಕಿತರಿಗೆ ಪರಿಣಾಮಕಾರಿಯಾದ ಪ್ಲಾಸ್ಮಾ ಥೆರಪಿಗೆ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗುತ್ತದೆ.#ಮನೆಯಲ್ಲೇಇರಿ pic.twitter.com/WwUedwstRx
— DIPR Karnataka (@KarnatakaVarthe) April 25, 2020
ಕಳೆದ ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರದಿಂದ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಅನುಮೋದನೆ ಸಿಕ್ಕಿತ್ತು. ಡಾ.ವಿಶಾಲ್ ರಾವ್ ನೇತೃತ್ವದ ಮೂವರು ವೈದ್ಯರ ತಂಡಕ್ಕೆ, ಚಿಕಿತ್ಸೆ ಆರಂಭಿಸಲು ರಾಜ್ಯ ಸರ್ಕಾರ ಸೂಚಿಸಿತ್ತು. ತಂಡದಲ್ಲಿ ವಿಶಾಲ್ ಅವರ ಜೊತೆಗೆ ಇಬ್ಬರು ಪರಿಣಿತ ವೈದ್ಯರಾದ ಡಾ.ಗುರುರಾಜ್ ರಾವ್ ಹಾಗೂ ಡಾ. ಜ್ಯೋತ್ಸ್ನಾ ಇದ್ದಾರೆ.








