ಮುಂಬೈ : ಕೊರೊನಾ ಸಂಕಷ್ಟದಲ್ಲಿ ಸಾಕಷ್ಟು ಮಂದಿಗೆ ಸಹಾಯ ಮಾಡಿರುವ ನಟ ಸೋನು ಸೂದ್ ಇದೀಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಜ್ಜಿಯ ಲಾಠಿ ಕೈಚಳಕದ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಅವರ ಅಡ್ರೆಸ್ ಕೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸೋನು ಸೂದ್, ದಯವಿಟ್ಟು ನಾನು ಈ ಅಜ್ಜಿಯ ಬಗ್ಗೆ ಮಾಹಿತಿ ಪಡೆಯಬಹುದೆ..? ನಮ್ಮ ದೇಶದ ಮಹಿಳೆಯರಿಗೆ ಕೆಲ ರಕ್ಷಣಾ ತಂತ್ರಗಳನ್ನು ಕಲಿಸಿಕೊಡಲು ಇವರ ಅವಶ್ಯಕತೆ ಇದೆ. ಈ ಕುರಿತು ಸಣ್ಣ ತರಬೇತಿ ಶಾಲೆಯನ್ನು ತೆರೆಯಬೇಕೆಂದುಕೊಂಡಿದ್ದೇನೆ. ಹೀಗಾಗಿ ಇವರ ಬಗ್ಗೆ ಮಾಹಿತಿ ಕಳುಹಿಸಿ ಎಂದು ಕೇಳಿ ಟ್ವೀಟ್ ಮಾಡಿದ್ದಾರೆ.
Can I get her details please. Wanna open a small training school with her where she can train women of our country some self defence techniques . https://t.co/Z8IJp1XaEV
— sonu sood (@SonuSood) July 24, 2020
ಸದ್ಯ ಸೋನು ಸೂದ್ ಅವರ ಟ್ವೀಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಈ ಅಜ್ಜಿ 85 ವರ್ಷದವರು, ಇವರ ಹೆಸರು ಶಾಂತಾ ಬಾಲು ಪವಾರ್. ಪುಣೆಯ ಹಡ್ಪಸರ್ ನವರು ಎಂದು ಟ್ವಿಟ್ಟರ್ ಬಳಕೆದಾರರು ತಿಳಿಸಿದ್ದಾರೆ.
.








