ADVERTISEMENT
Monday, November 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ಮೋದಿ, ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತರೇ ಪ್ರಮುಖ ಆರೋಪಿಗಳು ಎಂದ ಪ್ರಿಯಾಂಕ್ ಖರ್ಗೆ

Shwetha by Shwetha
November 2, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆದಿರುವ ಬೃಹತ್ ಅಕ್ರಮಗಳಿಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಇಡೀ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೇ ಪ್ರಮುಖ ಆರೋಪಿಗಳಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ಮತದಾರರ ಪಟ್ಟಿಯಿಂದ ಕೋಟ್ಯಂತರ ಜನರ ಹೆಸರನ್ನು ಅಕ್ರಮವಾಗಿ ಕೈಬಿಟ್ಟಿರುವ ಪ್ರಕ್ರಿಯೆಯ ಹಿಂದೆ ದೊಡ್ಡ ಮಟ್ಟದ ರಾಜಕೀಯ ಹಾಗೂ ತಾಂತ್ರಿಕ ಸಂಚು ಅಡಗಿದೆ ಎಂದು ಆರೋಪಿಸಿದರು.

Related posts

ಜ್ಞಾನೇಶ್ ಕುಮಾರ್ ಇಲ್ಲದಿದ್ದರೆ ಮೋದಿ ಪ್ರಧಾನಿ, ಶಾ ಗೃಹ ಸಚಿವರಾಗುತ್ತಿರಲಿಲ್ಲ: 2024ರ ಲೋಕಸಭಾ ಚುನಾವಣೆಯೇ ಅಕ್ರಮ-ಸಂವಿಧಾನ ರಕ್ಷಣೆಗೆ ಕೊನೆಯವರೆಗೂ ಹೋರಾಟ ಎಂದ ರಾಹುಲ್ ಗಾಂಧಿ

ಜ್ಞಾನೇಶ್ ಕುಮಾರ್ ಇಲ್ಲದಿದ್ದರೆ ಮೋದಿ ಪ್ರಧಾನಿ, ಶಾ ಗೃಹ ಸಚಿವರಾಗುತ್ತಿರಲಿಲ್ಲ: 2024ರ ಲೋಕಸಭಾ ಚುನಾವಣೆಯೇ ಅಕ್ರಮ-ಸಂವಿಧಾನ ರಕ್ಷಣೆಗೆ ಕೊನೆಯವರೆಗೂ ಹೋರಾಟ ಎಂದ ರಾಹುಲ್ ಗಾಂಧಿ

November 2, 2026
ಹಾಸನಾಂಬೆ ಜಾತ್ರೆ ಕಾಂಗ್ರೆಸ್ ಕಾರ್ಯಕ್ರಮವಾಗಿದೆಯೇ? ಫ್ಲೆಕ್ಸ್‌ನಲ್ಲಿ ಫೋಟೋ ಇಲ್ಲ, ಕರೆಯಲು ಸೌಜನ್ಯವಿಲ್ಲ:ಮೂವತ್ತು ವರ್ಷದ ರಾಜಕೀಯ ಹಿನ್ನೆಲೆಗೆ ಬೆಲೆಯೇ ಇಲ್ಲವೇ? ಗುಮಾಸ್ತನ ಕೈಲಿ ಪಾಸ್ ಕಳುಹಿಸಿದ್ದಕ್ಕೆ ದಳಪತಿ ಆಕ್ರೋಶ

ಹಾಸನಾಂಬೆ ಜಾತ್ರೆ ಕಾಂಗ್ರೆಸ್ ಕಾರ್ಯಕ್ರಮವಾಗಿದೆಯೇ? ಫ್ಲೆಕ್ಸ್‌ನಲ್ಲಿ ಫೋಟೋ ಇಲ್ಲ, ಕರೆಯಲು ಸೌಜನ್ಯವಿಲ್ಲ:ಮೂವತ್ತು ವರ್ಷದ ರಾಜಕೀಯ ಹಿನ್ನೆಲೆಗೆ ಬೆಲೆಯೇ ಇಲ್ಲವೇ? ಗುಮಾಸ್ತನ ಕೈಲಿ ಪಾಸ್ ಕಳುಹಿಸಿದ್ದಕ್ಕೆ ದಳಪತಿ ಆಕ್ರೋಶ

November 2, 2026

ಚುನಾವಣಾ ಆಯೋಗದ ನಿಗೂಢ ಮೌನವೇಕೆ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಕಳೆದ ಒಂದೂವರೆ ತಿಂಗಳಿನಿಂದ ಮತದಾರರ ಪಟ್ಟಿ ಪರಿಷ್ಕರಣೆಯ ಲೋಪಗಳ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಸಾಮಾನ್ಯವಾಗಿ ಕಾಂಗ್ರೆಸ್ ಯಾವುದೇ ಸಣ್ಣ ವಿಷಯ ಪ್ರಸ್ತಾಪಿಸಿದರೂ ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದ ಚುನಾವಣಾ ಆಯೋಗ, ಈಗೇಕೆ ಮೌನಕ್ಕೆ ಶರಣಾಗಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಆಯೋಗ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ವಕಾಲತ್ತು ವಹಿಸಿ ಉತ್ತರ ನೀಡುತ್ತಿರುವುದು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ದೇಶದಲ್ಲಿ ಸುಮಾರು 13.2 ಕೋಟಿ ಅಂದರೆ ಶೇಕಡಾ 15ರಷ್ಟು ಮತದಾರರನ್ನು ಯಾವುದೇ ಸಕಾರಣವಿಲ್ಲದೆ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇಂತಹ ಗಂಭೀರ ಲೋಪವನ್ನು ಪ್ರಶ್ನಿಸುವುದು ತಪ್ಪೇ ಎಂದು ಅವರು ಕಿಡಿಕಾರಿದರು.

ಇಬ್ಬರು ಆಯುಕ್ತರ ವಿರೋಧದ ನಡುವೆಯೂ ಏಕಪಕ್ಷೀಯ ನಿರ್ಧಾರ

ಚುನಾವಣಾ ಆಯೋಗದ ಆಂತರಿಕ ಕಾರ್ಯವೈಖರಿಯ ಬಗ್ಗೆಯೂ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಚಿವರು, ಆಯೋಗದ ಯಾವುದೇ ಪ್ರಮುಖ ನಿರ್ಧಾರಗಳನ್ನು ಮೂವರು ಆಯುಕ್ತರು ಒಮ್ಮತದಿಂದ ತೆಗೆದುಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಎಸ್‌ಐಆರ್ ವಿಚಾರದಲ್ಲಿ ಇಬ್ಬರು ಚುನಾವಣಾ ಆಯುಕ್ತರು ಲಿಖಿತವಾಗಿಯೇ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಿದ್ದರು. ಇದರ ಹೊರತಾಗಿಯೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದು ಯಾರ ಓಲೈಕೆಗಾಗಿ ಎಂದು ಖರ್ಗೆ ನೇರವಾಗಿ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲೂ ಫಾರ್ಮ್-7 ದುರುಪಯೋಗ

ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಬಳಸುವ ಫಾರ್ಮ್-7 ಅರ್ಜಿಗಳನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು. ವಿಜಯಪುರದಲ್ಲಿ ಜೀವಂತ ಇರುವವರನ್ನು ಮೃತಪಟ್ಟಿದ್ದಾರೆ ಎಂದು ಸುಳ್ಳು ದೂರು ನೀಡಿರುವುದು ಮತ್ತು ಚಿತ್ತಾಪುರದಲ್ಲಿ ನಿರ್ದಿಷ್ಟ ಸಮುದಾಯವೊಂದರ 40 ಜನರ ಹೆಸರನ್ನು ಕೈಬಿಡಲು ಯತ್ನಿಸಿರುವುದು ಇದಕ್ಕೆ ಜ್ವಲಂತ ಸಾಕ್ಷಿ. ಚಿತ್ತಾಪುರದಲ್ಲಿ ಜಿಲ್ಲಾಧಿಕಾರಿಗಳೇ ಖುದ್ದು ಪರಿಶೀಲನೆ ನಡೆಸಿದಾಗ ಆ ಮತದಾರರು ಅಲ್ಲಿಯೇ ವಾಸವಾಗಿರುವುದು ದೃಢಪಟ್ಟಿದ್ದು, ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿದೆ ಎಂದರು.

ಇದೇ ವೇಳೆ ಚುನಾವಣಾ ಆಯೋಗದ ತಾಂತ್ರಿಕ ವ್ಯವಸ್ಥೆಯ ಮೇಲೆ ಬೊಟ್ಟು ಮಾಡಿದ ಅವರು, ಆಯೋಗದ ಸಾಫ್ಟ್‌ವೇರ್ ಮತ್ತು ಲಾಗಿನ್ ವ್ಯವಸ್ಥೆಯನ್ನು ಬದಲಿಸಿ ಅಕ್ರಮಕ್ಕೆ ದಾರಿ ಮಾಡಿಕೊಟ್ಟವರು ಯಾರು? ಫಾರ್ಮ್-6 ಪ್ರಕ್ರಿಯೆ ಹಾಗೂ ಇಸಿಐನ ಇರೋನೆಟ್ ಜಾಲತಾಣದಲ್ಲಿ ಬದಲಾವಣೆ ಮಾಡಲು ಅನುಮತಿ ನೀಡಿದ ಕಾಣದ ಕೈಗಳು ಯಾವುವು ಎಂಬ ಸತ್ಯ ಬಯಲಾಗಬೇಕಿದೆ ಎಂದರು.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಹಿಂದೆಂದೂ ಬೀದಿಗಿಳಿದು ಪ್ರತಿಭಟನೆ ಮಾಡಿದ ಇತಿಹಾಸವಿಲ್ಲ. ಆದರೆ ಈಗ ಅವರೇ ಬೀದಿಗಿಳಿದಿದ್ದಾರೆ ಎಂದರೆ ಅವರ ಬಂಡವಾಳ ಬಯಲಾಗುತ್ತಿದೆ ಎಂದರ್ಥ ಎಂದು ಪ್ರಿಯಾಂಕ್ ಲೇವಡಿ ಮಾಡಿದರು. ಇನ್ನು ವಿದ್ಯಾರ್ಥಿಗಳ ಪ್ರತಿಭಟನೆಯ ಹಿಂದೆ ವಿದೇಶಿ ಹಣಕಾಸಿನ ನೆರವು ಮತ್ತು ಕೈವಾಡವಿದೆ ಎಂದು ಆರೋಪಿಸುವ ಬಿಜೆಪಿ ನಾಯಕರು, ಕೇಂದ್ರದಲ್ಲಿ ತಮ್ಮದೇ ಸರ್ಕಾರವಿದ್ದರೂ ಯಾಕೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಸವಾಲು ಹಾಕಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಲಘುವಾಗಿ ಮಾತನಾಡುವ ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಅವರು, ಖರ್ಗೆ ಅವರ ರಾಜಕೀಯ ಅನುಭವದಷ್ಟೇ ತಮ್ಮ ವಯಸ್ಸಿದೆ ಎಂಬುದನ್ನು ನೆನಪಿಟ್ಟುಕೊಳ್ಳಲಿ ಎಂದು ಚಾಟಿ ಬೀಸಿದರು. ತಾಕತ್ತಿದ್ದರೆ ತಮ್ಮ ರಾಜಕೀಯ ಗುರುಗಳಾದ ಪ್ರಧಾನಿ ಮೋದಿ ಅವರಿಂದ ಒಂದು ಪತ್ರಿಕಾಗೋಷ್ಠಿ ನಡೆಸಿಸಿ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡಿಸಲಿ ಎಂದು ಸವಾಲು ಹಾಕಿದರು.

ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗಾಗಿ ಐಟಿ-ಬಿಟಿ ಸಚಿವನಾಗಿ ನಾನು ಎಥಿಕಲ್ ಹ್ಯಾಕಥಾನ್ ನಡೆಸಲು ಆಹ್ವಾನ ನೀಡಿದರೆ ಬಿಜೆಪಿ ವಿರೋಧಿಸುವುದೇಕೆ? ಇನ್ನು ರಾಜ್ಯದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಫಲಿತಾಂಶವೇ 2028ರ ಚುನಾವಣೆಗೆ ದಿಕ್ಸೂಚಿ ಎನ್ನುವುದಾದರೆ, ಪ್ರಧಾನಿ ಮೋದಿ ಅವರು ವಾರಾಣಸಿ ಹಾಗೂ ನಾಗಪುರದಲ್ಲಿ ಹಿನ್ನಡೆ ಅನುಭವಿಸಿದ್ದನ್ನು ಮುಂದಿನ ಚುನಾವಣೆಯ ದಿಕ್ಸೂಚಿ ಎನ್ನಬಹುದೇ? ಬ್ಯಾಲೆಟ್ ಪೇಪರ್ ಮೂಲಕ ನಡೆಯುವ ಚುನಾವಣೆಯಲ್ಲಿ ಗೆದ್ದು ಬೀಗುವ ಬಿಜೆಪಿಯವರು, ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನೂ ಬ್ಯಾಲೆಟ್ ಪೇಪರ್ ಮೂಲಕವೇ ಎದುರಿಸಲಿ ಎಂದು ಪ್ರಿಯಾಂಕ್ ಖರ್ಗೆ ಪಂಥಾಹ್ವಾನ ನೀಡಿದ್ದಾರೆ.

ShareTweetSendShare
Join us on:

Related Posts

ಜ್ಞಾನೇಶ್ ಕುಮಾರ್ ಇಲ್ಲದಿದ್ದರೆ ಮೋದಿ ಪ್ರಧಾನಿ, ಶಾ ಗೃಹ ಸಚಿವರಾಗುತ್ತಿರಲಿಲ್ಲ: 2024ರ ಲೋಕಸಭಾ ಚುನಾವಣೆಯೇ ಅಕ್ರಮ-ಸಂವಿಧಾನ ರಕ್ಷಣೆಗೆ ಕೊನೆಯವರೆಗೂ ಹೋರಾಟ ಎಂದ ರಾಹುಲ್ ಗಾಂಧಿ

ಜ್ಞಾನೇಶ್ ಕುಮಾರ್ ಇಲ್ಲದಿದ್ದರೆ ಮೋದಿ ಪ್ರಧಾನಿ, ಶಾ ಗೃಹ ಸಚಿವರಾಗುತ್ತಿರಲಿಲ್ಲ: 2024ರ ಲೋಕಸಭಾ ಚುನಾವಣೆಯೇ ಅಕ್ರಮ-ಸಂವಿಧಾನ ರಕ್ಷಣೆಗೆ ಕೊನೆಯವರೆಗೂ ಹೋರಾಟ ಎಂದ ರಾಹುಲ್ ಗಾಂಧಿ

by Shwetha
November 2, 2026
0

ನವದೆಹಲಿ: ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಇಂಡಿಯಾ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ...

ಹಾಸನಾಂಬೆ ಜಾತ್ರೆ ಕಾಂಗ್ರೆಸ್ ಕಾರ್ಯಕ್ರಮವಾಗಿದೆಯೇ? ಫ್ಲೆಕ್ಸ್‌ನಲ್ಲಿ ಫೋಟೋ ಇಲ್ಲ, ಕರೆಯಲು ಸೌಜನ್ಯವಿಲ್ಲ:ಮೂವತ್ತು ವರ್ಷದ ರಾಜಕೀಯ ಹಿನ್ನೆಲೆಗೆ ಬೆಲೆಯೇ ಇಲ್ಲವೇ? ಗುಮಾಸ್ತನ ಕೈಲಿ ಪಾಸ್ ಕಳುಹಿಸಿದ್ದಕ್ಕೆ ದಳಪತಿ ಆಕ್ರೋಶ

ಹಾಸನಾಂಬೆ ಜಾತ್ರೆ ಕಾಂಗ್ರೆಸ್ ಕಾರ್ಯಕ್ರಮವಾಗಿದೆಯೇ? ಫ್ಲೆಕ್ಸ್‌ನಲ್ಲಿ ಫೋಟೋ ಇಲ್ಲ, ಕರೆಯಲು ಸೌಜನ್ಯವಿಲ್ಲ:ಮೂವತ್ತು ವರ್ಷದ ರಾಜಕೀಯ ಹಿನ್ನೆಲೆಗೆ ಬೆಲೆಯೇ ಇಲ್ಲವೇ? ಗುಮಾಸ್ತನ ಕೈಲಿ ಪಾಸ್ ಕಳುಹಿಸಿದ್ದಕ್ಕೆ ದಳಪತಿ ಆಕ್ರೋಶ

by Shwetha
November 2, 2026
0

ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಶಕ್ತಿದೇವತೆ ಹಾಸನಾಂಬೆಯ ದರ್ಶನೋತ್ಸವವು ಈ ಬಾರಿ ಭಕ್ತಿಗಿಂತ ಹೆಚ್ಚಾಗಿ ರಾಜಕೀಯ ಸಂಘರ್ಷ ಹಾಗೂ ಶಿಷ್ಟಾಚಾರ ಉಲ್ಲಂಘನೆಯ ವಿವಾದದಿಂದಲೇ ಸುದ್ದಿಯಾಗುತ್ತಿದೆ. ಜಿಲ್ಲಾಡಳಿತ...

ಮೋದಿ ಗದ್ದುಗೆ ಇಳಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಉಳಿವು: ಜನಾದೇಶವಲ್ಲ, ಮತಗಳ್ಳತನದಿಂದ ಬಿಜೆಪಿಗೆ ಅಧಿಕಾರ- ದೆಹಲಿ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಗುಡುಗು

ಮೋದಿ ಗದ್ದುಗೆ ಇಳಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಉಳಿವು: ಜನಾದೇಶವಲ್ಲ, ಮತಗಳ್ಳತನದಿಂದ ಬಿಜೆಪಿಗೆ ಅಧಿಕಾರ- ದೆಹಲಿ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಗುಡುಗು

by Shwetha
November 2, 2026
0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನವು ಭಾನುವಾರ ಆಡಳಿತಾರೂಢ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಇಂಡಿಯಾ ಒಕ್ಕೂಟ ಆಯೋಜಿಸಿದ್ದ...

ಬಯಲಾಯಿತು ಸ್ಟಿಂಗ್ ರಹಸ್ಯ: ಕೇಂದ್ರ ಸಚಿವರ ದೆಹಲಿ ಬಂಗಲೆಯಲ್ಲೇ ಫೋನ್ ಹಸ್ತಾಂತರವಾಗಿದ್ದನ್ನು ಖಚಿತಪಡಿಸಿದ ಪೊಲೀಸ್ ಆಯುಕ್ತರು-ಸ್ಟಿಂಗ್ ವಿಡಿಯೋ ಹಿಂದಿನ ಅಸಲಿ ಸೂತ್ರಧಾರ ಯಾರು?

ಬಯಲಾಯಿತು ಸ್ಟಿಂಗ್ ರಹಸ್ಯ: ಕೇಂದ್ರ ಸಚಿವರ ದೆಹಲಿ ಬಂಗಲೆಯಲ್ಲೇ ಫೋನ್ ಹಸ್ತಾಂತರವಾಗಿದ್ದನ್ನು ಖಚಿತಪಡಿಸಿದ ಪೊಲೀಸ್ ಆಯುಕ್ತರು-ಸ್ಟಿಂಗ್ ವಿಡಿಯೋ ಹಿಂದಿನ ಅಸಲಿ ಸೂತ್ರಧಾರ ಯಾರು?

by Shwetha
November 2, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಚರ್ಚಾಸ್ಪದ ಸ್ಟಿಂಗ್ ಆಪರೇಷನ್ ಪ್ರಕರಣವು ಇದೀಗ ಅನಿರೀಕ್ಷಿತ ಹಾಗೂ ಸ್ಫೋಟಕ ತಿರುವು...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (2-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 2, 2026
0

ದಿನ ಭವಿಷ್ಯ: 02-11-2026 1. ಮೇಷ ರಾಶಿ (ಅಶ್ವಿನಿ, ಭರಣಿ, ಕೃತ್ತಿಕಾ 1ನೇ ಪಾದ) ಗ್ರಹ ಸ್ಥಿತಿ: ನಿಮ್ಮ ರಾಶಿಯಿಂದ ಚತುರ್ಥ ಭಾವದಲ್ಲಿ ಅಂದರೆ ಸುಖ ಸ್ಥಾನದಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram