ಪಿಎಂ ಮೋದಿ ಮತ್ತು ಶಾಹೀನ್ ಬಾಗ್ ಪ್ರತಿಭಟನೆಯ ಬಿಲ್ಕಿಸ್, ಟೈಮ್ ನಿಯತಕಾಲಿಕೆಯ ಪ್ರಭಾವಶಾಲಿ ವ್ಯಕ್ತಿಗಳು
ಹೊಸದಿಲ್ಲಿ, ಸೆಪ್ಟೆಂಬರ್26: ಪಿಎಂ ಮೋದಿ ಮತ್ತು ಶಾಹೀನ್ ಬಾಗ್ ಪ್ರತಿಭಟನೆಯ ಬಿಲ್ಕಿಸ್ ದಾದಿ ಇಬ್ಬರೂ 2020 ರ ಟೈಮ್ ನಿಯತಕಾಲಿಕೆಯ 100 ಮಂದಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿಎಎ, ಎನ್‌ಆರ್‌ಸಿ ವಿರುದ್ಧ ಕಳೆದ ವರ್ಷ ದೆಹಲಿಯಲ್ಲಿ ನಡೆದ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 82 ವರ್ಷದ ಬಿಲ್ಕಿಸ್ ಮತ್ತು ಪಿಎಂ ನರೇಂದ್ರ ಮೋದಿ ಅವರು ಟೈಮ್ ನಿಯತಕಾಲಿಕೆಗೆ 2020 ರ ಅತ್ಯಂತ ಪ್ರಭಾವಶಾಲಿ 100 ಜನರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಈಗ ಬಿಲ್ಕಿಸ್ ಅವರು ಪ್ರಧಾನಿ ಮೋದಿಯವರು ನನ್ನ ಮಗ ಮತ್ತು ಅವರು ಆಹ್ವಾನಿಸಿದರೆ ಅವರನ್ನು ಭೇಟಿಯಾಗಲು ಸಂತೋಷ ಪಡುತ್ತೇನೆ ಎಂದು ಹೇಳಿದ್ದಾರೆ.
ಹೋಗಿ ಬನ್ನಿ ಎಸ್’ಪಿಬಿ ಸರ್.. ವೀ ಮಿಸ್ ಯೂ.. !
82 ವರ್ಷದ ಬಿಲ್ಕಿಸ್, ತನ್ನ ಇಬ್ಬರು ಸ್ನೇಹಿತರಾದ ಅಸ್ಮಾ ಖತೂನ್ (90) ಮತ್ತು ಸರ್ವಾರಿ (75) ಅವರೊಂದಿಗೆ ಪ್ರತಿದಿನ ಪ್ರತಿಭಟನಾ ಸ್ಥಳದಲ್ಲಿದ್ದರು. ಕಳೆದ ಡಿಸೆಂಬರ್‌ನ ಚಳಿಗಾಲದಲ್ಲಿ ದಾಖಲಾದ ಶತಮಾನದ ಚಳಿಯನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಮೂವರನ್ನು ಸೋಷಿಯಲ್ ಮೀಡಿಯಾದಲ್ಲಿ ದಾಹೀಸ್ ಆಫ್ ಶಾಹೀನ್ ಬಾಗ್ ಎಂದು ಪ್ರಶಂಸಿಸಲಾಗಿದೆ.
ಕೊರೋನವೈರಸ್ ಸೋಂಕಿನ ನಂತರ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಘೋಷಿಸಿದ ಲಾಕ್‌ಡೌನ್ ಬಳಿಕ ಮಾರ್ಚ್‌ನಲ್ಲಿ ಶಾಹೀನ್ ಬಾಗ್‌ನ ಪ್ರತಿಭಟನೆ ಕೊನೆಗೊಂಡಿತ್ತು.