ಭೂಮಿ ಪೂಜಾ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ
ಅಯೋಧ್ಯೆ, ಅಗಸ್ಟ್ 5: ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ದಶಕಗಳಿಂದ ಕೋಟ್ಯಾಂತರ ಭಕ್ತರು ತವಕದಿಂದ ಕಾಯುತ್ತಿರುವ ಕ್ಷಣಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ಮೋದಿ ಈಗಾಗಲೇ ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾರೆ. ನರೇಂದ್ರ ಮೋದಿ ಅವರು ಈಗಾಗಲೇ ದೇವ ವೃಕ್ಷವೆಂದೇ ಕರೆಯಲ್ಪಡುವ ಪಾರಿಜಾತ ಗಿಡವನ್ನು ನೆಡುವ ಮೂಲಕ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಪ್ರಧಾನಿ ಮೋದಿ ಇಂದು 40 ಕಿಲೋ ತೂಕದ ಮೊದಲ ಬೆಳ್ಳಿ ಇಟ್ಟಿಗೆಯನ್ನು ಪ್ರತಿಷ್ಠಾಪಿಸಲಿದ್ದಾರೆ. ವಿಹಿಂಪ ಮುಖಂಡ ದಿ| ಅಶೋಕ್ ಸಿಂಘಲ್ ಅವರ ಸೋದರಳಿಯ ಸಲಿಲ್ ಸಿಂಘಲ್ ಭೂಮಿಪೂಜೆ ಮುನ್ನಡೆಸಲಿದ್ದಾರೆ. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಜೀ ಭಾಗವತ್, ಸಿಎಂ ಯೋಗಿ ಆದಿತ್ಯನಾಥ್, ನ್ಯಾಸ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲದಾಸ್ ವೇದಿಕೆ ಅಲಂಕರಿಸಲಿದ್ದಾರೆ.
ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ರಾಮ ಭಕ್ತರು ಈ ಐತಿಹಾಸಿಕ ಘಟನೆಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
https://www.facebook.com/saakshatv/videos/1237737996563765/