ಭಾರತದ ಮೊದಲ ಸ್ವಯಂಚಾಲಿತ ಚಾಲಕರಹಿತ ಮೆಟ್ರೋ ರೈಲು ಲೋಕಾರ್ಪಣೆ driverless metro train
ಹೊಸದಿಲ್ಲಿ, ಡಿಸೆಂಬರ್29: ಭಾರತದ ಮೊದಲ ಸ್ವಯಂಚಾಲಿತ ಚಾಲಕರಹಿತ ಮೆಟ್ರೋ ರೈಲು ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಈ ರೈಲಿಗೆ ಚಾಲನೆ ನೀಡಿದ್ದಾರೆ. driverless metro train
ಪ್ರಧಾನಿ ನರೇಂದ್ರ ಮೋದಿ ಅವರು 37 ಕಿ.ಮೀ-ಮೆಜೆಂಟಾ ಮಾರ್ಗದಲ್ಲಿ (ಜನಕ್ಪುರಿ ಪಶ್ಚಿಮದಿಂದ ಬೊಟಾನಿಕಲ್ ಗಾರ್ಡನ್) ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕರಹಿತ ರೈಲು ಸೇವೆಗೆ ಚಾಲನೆ ನೀಡಿದ್ದಾರೆ ಇದು ದೇಶದ ಮೊದಲ ಸ್ವಯಂ ಚಾಲಿತ ಚಾಲಕರಹಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೋಟಾರು ವಾಹನ ದಾಖಲೆಗಳ ಸಿಂಧುತ್ವ ಮಾರ್ಚ್ 31, 2021 ರವರೆಗೆ ಮಾನ್ಯ
ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿರುವ ಹೊಸ ಚಾಲಕರಹಿತ ರೈಲಿನಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಬಹುದಾಗಿದೆ. ಇದು ಬ್ರೇಕಿಂಗ್ ಸಮಯದಲ್ಲಿ ಉತ್ತಮ ಶಕ್ತಿಯ ಪುನರುತ್ಪಾದನೆ, ಎಲ್ಇಡಿ ಲೈಟಿಂಗ್ ಮತ್ತು ಹವಾನಿಯಂತ್ರಣ ವ್ಯವಸ್ಥೆಗಳಂತಹ ಸುಧಾರಿತ ವಿನ್ಯಾಸದ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಡಿಎಂಆರ್ಸಿ ಹೇಳಿದೆ. ಇದರ ಉದ್ಘಾಟನೆ ಆಗಿರುವುದು ತ್ವರಿತ ಸಾರಿಗೆ ಜಾಲ ಮತ್ತು ದೇಶಕ್ಕೆ ಪ್ರಮುಖ ತಾಂತ್ರಿಕ ಮೈಲಿಗಲ್ಲಾಗಿದೆ.
ದೆಹಲಿ ಮೆಟ್ರೋ ಭಾರತದ ಅತಿ ದೊಡ್ಡ ಮೆಟ್ರೋ ಸೇವೆಯಾಗಿದ್ದು, ಕೋಲ್ಕತಾ ಮೆಟ್ರೋನ ನಂತರ ದೇಶದ ಅತ್ಯಂತ ಹಳೆಯ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಾಲಕರಹಿತ ರೈಲುಗಳು ಮೆಜೆಂಟಾ ಲೈನ್ ಮತ್ತು ಪಿಂಕ್ ಲೈನ್ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದನ್ನು ಡಿಎಂಆರ್ಸಿ ನೆಟ್ವರ್ಕ್ನ ಮೂರನೇ ಹಂತದ ಭಾಗವಾಗಿ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮೆಟ್ರೋ ರೈಲಿನ ಲೋಕಾರ್ಪಣೆಯ ಜೊತೆಗೆ 23 ಕಿ.ಮೀ ವಿಮಾನ ನಿಲ್ದಾಣ ಎಕ್ಸ್ಪ್ರೆಸ್ ಮಾರ್ಗದಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಅನುಮತಿಸುವ ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ (ಎನ್ಸಿಎಂಸಿ) ಅನ್ನು ಸಹ ಬಿಡುಗಡೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಳಿಗಾಲದಲ್ಲಿ ಬೆಲ್ಲವನ್ನು ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/cZKY8Lo1PQ
— Saaksha TV (@SaakshaTv) December 28, 2020
2021ನೇ ವರ್ಷದಲ್ಲಿ ನಡೆಯಲಿದೆ ನಾಲ್ಕು ಗ್ರಹಣಗಳುhttps://t.co/46DzVFcdCF
— Saaksha TV (@SaakshaTv) December 28, 2020