ಸುರಂಗ ಮಾರ್ಗ ಉದ್ಘಾಟನೆ ವೇಳೆ ಕಸ ಎತ್ತಿಹಾಕಿದ ಮೋದಿ (ವೀಡಿಯೋ)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್ಪಾಸ್ಗಳನ್ನು ಜನತೆಗೆ ಸಮರ್ಪಿಸಿದರು.
ಉದ್ಘಾಟನೆಯ ನಂತರ ಸುರಂಗ ಮಾರ್ಗವನ್ನ ಪರಿಶೀಲಿಸುತ್ತಿರುವಾಗ ಬಿಸಾಡಿದ್ದ ಕಸ ಮತ್ತು ಬಾಟಲಿಯನ್ನ ಎತ್ತಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ.
#WATCH | Prime Minister Narendra Modi picks up litter at the newly launched ITPO tunnel built under Pragati Maidan Integrated Transit Corridor, in Delhi
(Source: PMO) pic.twitter.com/mlbiTy0TsR
— ANI (@ANI) June 19, 2022
ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಈ ಯೋಜನೆಯು ಕೋವಿಡ್ ಸೇರಿದಂತೆ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ಇಂತಹ ಯೋಜನೆಗಳ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ನ್ಯಾಯಾಂಗದ ಬಾಗಿಲು ಬಡಿಯುವವರಿಗೆ ನಮ್ಮ ದೇಶದಲ್ಲಿ ಕೊರತೆಯಿಲ್ಲ ಆದರೆ ಸರ್ಕಾರ ಅದನ್ನು ಪೂರೈಸಿದೆ ಎಂದು ಪ್ರಧಾನಿ ಹೇಳಿದರು.
ಕಳೆದ ಎಂಟು ವರ್ಷಗಳಲ್ಲಿ, ದೆಹಲಿ-ಎನ್ಸಿಆರ್ನ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮೋದಿ ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ ದೆಹಲಿ-ಎನ್ಸಿಆರ್ನಲ್ಲಿ ಮೆಟ್ರೋ ಸೇವೆಗಳು 193 ಕಿಲೋಮೀಟರ್ಗಳಿಂದ 400 ಕಿಲೋಮೀಟರ್ಗಳಿಗೆ ಏರಿಕೆಯಾಗಿದೆ ಎಂದು ಅವರು ಹೈಲೈಟ್ ಮಾಡಿದರು.








