ಕರ್ನಾಟಕಕ್ಕೆ ಮೊದಿ ಆಗಮನ – ಸ್ವಾಗತಕ್ಕೆ ಸಜ್ಜಾದ ಮಂಗಳೂರು…
ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮನ ಹಿನ್ನಲೆಯಲ್ಲಿ ಕುಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಖುದ್ದು ತಯಾರಿ ನಡೆಯತ್ತಿದೆ. ಸಮಾವೇಶಕ್ಕೆ 1 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.
ಪ್ರಧಾನಿ ಮೋದಿ ವಿವಿಧ ಅಭಿವೃದ್ದಿ ಯೋಜನೆಗಳನ್ನ ದೇಶಕ್ಕೆ ಸಮರ್ಪಿಸಿದ ನಂತರ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ರಾಜಕೀಯ ಕಾರಣಗಳಿಗೂ ಈ ಸಮಾವೇಶ ಮುಖ್ಯವಾಗಿರುವುದರಿಂದ ತುಂಬಾ ಮುತುವರ್ಜಿ ವಹಿಸಿ ನೊಡಿಕೊಳ್ಳಲಾಗುತ್ತಿದೆ. ಸಮಾವೇಶದ ಬಳಿಕ ಪಕ್ಷದ ಕೋರ್ ಕಮಿಟಿ ಸಭೆ ಕೂಡ ನಡೆಯಲಿದೆ.
ಸಮಾವೇಶಕ್ಕೆ ಉಭಯ ಜಿಲ್ಲೆಗಳಿಂದ ಜನರನ್ನ ಕರೆತರಲು 2000 ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಮೋದಿಯವರಿಗೆ ಸ್ಮರಣಾರ್ಥವಾಗಿ ತುಳು ನಾಡ ನಿರ್ಮಾತೃ ಪರುಶುರಾಮರ ಪುತ್ಥಳಿಯನ್ನ ಕಾಣಿಕೆಯಾಗಿ ಕೊಡಲು ನಿಶ್ಚಯಿಸಲಾಗಿದೆ.








