ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯೂ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಟೊಂಕಕಟ್ಟಿ ನಿಂತಿದ್ದಾರೆ. ಹೀಗಾಗಿ ಹೆಚ್ಚು ಕ್ಷೇತ್ರಗಳಿಗೆ ಪ್ರಚಾರಕ್ಕೆಂದು ತೆರಳುತ್ತಿದ್ದಾರೆ.
ಸದ್ಯ ಪ್ರಧಾನಿ ಹೋದಲೆಲ್ಲಾ ವಿಶೇಷ ಗಿಫ್ಟ್ ನೀಡಲಾಗುತ್ತಿದೆ. ಕೋಲಾರದಲ್ಲಿ ಪ್ರಧಾನಿ ಮೋದಿಗೆ ಮರದಿಂದ ನಿರ್ಮಾಣ ಮಾಡಿರುವ 15 ಕೆಜಿ ತೂಕದ ಬುದ್ಧನ ವಿಗ್ರಹ ನೀಡಲಾಗಿದೆ. ಕೋಲಾರ ಸಂಸದ ಎಸ್. ಮುನಿಸ್ವಾಮಿ ಅವರು ಪ್ರಧಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಕೋಲಾರ ಸಂಸದ ಎಸ್. ಮುನಿಸ್ವಾಮಿ ಅವರು ಪ್ರಧಾನಿಗಳಿಗೆ ಉಡುಗೊರೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ 5.3 ಕೆಜಿ ತೂಕದ ಪಂಚಲೋಹದ ಅಂಬೆಗಾಲು ಕೃಷ್ಣನ ವಿಗ್ರಹ ಹಾಗೂ ಶ್ರೀಕೃಷ್ಣನ ವಿಗ್ರಹವನ್ನು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ನೀಡಿದ್ದಾರೆ. ಹಾಸನದ ಬೇಲೂರಿನಲ್ಲಿ ಹೊಯ್ಸಳ ಲಾಂಛನವನ್ನ ಗಿಫ್ಟ್ ಆಗಿ ನೀಡಲಾಗಿದೆ. ಹಾಸನ ಜಿಲ್ಲಾ ಬಿಜೆಪಿಯಿಂದ ಹೊಯ್ಸಳ ಲಾಂಛನ ಉಡುಗೊರೆ ನೀಡಲಾಗಿದೆ.
ಸುಮಾರು ಒಂದುವರೆ ಅಡಿ ಉದ್ದದ ನಾಲ್ಕು ಕೆಜಿ ತೂಕದ ಹಸಿರು ಕಲ್ಲಿನಲ್ಲಿ ಕೆತ್ತಿರುವ ಹೊಯ್ಸಲ ಲಾಂಛನ ಎಲ್ಲರ ಗಮನ ಸೆಳೆದಿದೆ. ಹೊಯ್ಸಳ ಲಾಂಛನ ಸಳ ಹುಲಿಯನ್ನು ಕೊಂದು ಹೊಯ್ಸಳ ಸಾಮ್ರಾಜ್ಯ ಸ್ಥಾಪಿಸಿದ ಸಂಕೇತವಾಗಿದೆ. ಬೇಲೂರಿನ ಸ್ಥಳೀಯ ಶಿಲ್ಪಿಗಳು ಉಡುಗೊರೆಯನ್ನು ತಯಾರಿಸಿದ್ದರು.
ಶಾಸಕ ಎಸ್.ಎ ರಾಮದಾಸ್ ಮೋದಿಗಾಗಿ ಮೈಸೂರು ವಿಶಿಷ್ಟತೆ ಪ್ರತೀಕವಾದ 18 ವಸ್ತುಗಳನ್ನು ನೀಡಿದ್ದಾರೆ. ಎಲ್ಲದರ ನಡುವೆ ಹಾಸನದಲ್ಲಿ ತನ್ನ ನೆಚ್ಚಿನ ನಾಯಕನಿಗೆ ನೀಡಲು ಕಲ್ಪಿತ್ ಎಂಬ ಬಾಲಕ ಕಮಲದ ಹೂಗುಚ್ಚ ತಂದಿದ್ದು ವಿಶೇಷವಾಗಿತ್ತು. ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಮತ್ತು ದಳಪತಿಗಳ ಸುಭದ್ರಕೋಟೆಗಳಾದ ಕೋಲಾರ, ಹಾಸನ, ರಾಮನಗರ ಅಂಡ್ ಮೈಸೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿ ದೆಹಲಿಗೆ ವಾಪಸ್ ಆಗಿದ್ದಾರೆ.








