ಇಂದು ದೇಶವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ
ಹೊಸದಿಲ್ಲಿ, ಜುಲೈ 26: ಪ್ರಧಾನಿ ನರೇಂದ್ರ ಮೋದಿಯವರು ಇಂದು (ಜು.26) ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜುಲೈ 26 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ತಮ್ಮ ಮನ್ ಕಿ ಬಾತ್ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 77 ನೇ ಮನ್ ಕಿ ಬಾತ್ ಸಂಚಿಕೆಗಾಗಿ, ಜುಲೈ 11ರಂದು ಟ್ವೀಟ್ ಮಾಡಿದ್ದ ಪ್ರಧಾನಿಯವರು, ಸಾಮೂಹಿಕ ಪ್ರಯತ್ನಗಳಿಂದ ಜೀವನವು ಸಕಾರಾತ್ಮಕ ಬದಲಾವಣೆ ಕಂಡ ಸ್ಫೂರ್ತಿದಾಯಕ ಕತೆಗಳು ನಿಮ್ಮಲ್ಲಿ ಅನೇಕರಿಗೆ ಗೊತ್ತಿರುತ್ತದೆ. ಅಂತಹ ಸ್ಪೂರ್ತಿದಾಯಕ ಘಟನೆಗಳನ್ನು ಈ ಬಾರಿಯ ಮನ್ ಕೀ ಬಾತ್ ಗಾಗಿ ನನ್ನೊಂದಿಗೆ ಶೇರ್ ಮಾಡಿಕೊಳ್ಳಿ ಎಂದು ಜನರಲ್ಲಿ ಕೇಳಿದ್ದರು.

ಜೂನ್ 28 ರಂದು ನಡೆದ ಮನ್ ಕಿ ಬಾತ್ ಸಂಚಿಕೆಯಲ್ಲಿ, ಮೋದಿ ಅವರು ಚೀನಾದೊಂದಿಗಿನ ಗಡಿ ವಿವಾದದ ಬಗ್ಗೆ ಮಾತನಾಡಿದ್ದರು ಮತ್ತು ಜೂನ್ 15 ರಂದು ಚೀನಾದ ಸೈನ್ಯದೊಂದಿಗೆ ಗಾಲ್ವೇ ಕಣಿವೆಯ ಘರ್ಷಣೆಯಲ್ಲಿ ಹುತಾತ್ಮ ರಾದ ಭಾರತೀಯ ಸೇನಾ ಸೈನಿಕರ ಸಾಹಸವನ್ನು ಶ್ಲಾಘಿಸಿದ್ದರು.








