PM Narendra Modi : ಮೋದಿ ಅವರ ಹತ್ಯೆ ಮಾಡಬೇಕೆಂದು ಹೇಳಿದ್ದ ಕಾಂಗ್ರೆಸ್ ಮಾಜಿ ಸಚಿವ ಬಂಧನ
ಪ್ರಧಾನಿ ಮೋದಿ ಅವರ ಹತ್ಯೆ ಮಾಡಬೇಕೆಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ( ಮಾಜಿ ಸಚಿವ) ರಾಜಾ ಪಟೇರಿಯಾರನ್ನ ಬಂಧಿಸಲಾಗಿದೆ..
ಸಂವಿಧಾನವನ್ನು ಉಳಿಸಲು ಪಿಎಂ ಮೋದಿಯವರನ್ನು ಕೊಲ್ಲಬೇಕು ಎಂದು ಸಭೆಯೊಂದರಲ್ಲಿ ಪಟೇರಿಯಾ ಹೇಳಿದ್ದು ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿತ್ತು..
ಅವರ ಹೇಳಿಕೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪಟೇರಿಯಾ ಅವರ ಹೇಳಿಕೆಗಳನ್ನು ಆಧರಿಸಿ, ಮಧ್ಯಪ್ರದೇಶ ಸರ್ಕಾರವು ಮಾಜಿ ಸಚಿವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿತ್ತು.
ಪನ್ನಾದ ಪಾವಾಯಿ ಪೊಲೀಸ್ ಠಾಣೆಯಲ್ಲಿ ಪಟೇರಿಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದನ್ನ ತೀವ್ರವಾಗಿ ಖಂಡಿಸಿದ್ದರು..
ಭಾರತ್ ಜೋಡೋ ಯಾತ್ರೆ ಮಾಡುವವರ ನಿಜವಾದ ಮುಖ ಹೊರಬಂದಿದೆ ಎಂದು ರಾಹುಲ್ ಗಾಂಧಿ ಅವರ ವಿರುದ್ಧವೂ ಟೀಕೆ ಮಾಡಿದ್ದರು..
Raja pateria got arrested after giving statement of killing PM Narendra Modi








