ನವದೆಹಲಿ, ಸೆ.21: ದಸರಾ (Dasara) ಆರಂಭದ ಜೊತೆಗೆ ಹೊಸ ಜಿಎಸ್ಟಿ (GST) ಆರಂಭವಾಗಲಿದೆ. ನವರಾತ್ರಿ ಮೊದಲ ದಿನದಂದು ಜಿಎಸ್ಟಿ ಉಳಿತಾಯದ ಉತ್ಸವ ಶುರುವಾಗಲಿದೆ. ಜಿಎಸ್ಟಿ ಕಡಿತದಿಂದ ನಿಮ್ಮ ಆದಾಯ ಉಳಿತಾಯವಾಗಲಿದೆ. ನಿಮ್ಮ ನೆಚ್ಚಿನ ವಸ್ತುಗಳನ್ನು ಖರೀದಿ ಮಾಡಲು ಸಹಾಯವಾಗಲಿದೆ. ಜಿಎಸ್ಟಿ ಸುಧಾರಣೆಯಿಂದ ದೇಶ ಅಭಿವೃದ್ಧಿಯತ್ತ ಹೆಜ್ಜೆ ಇಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹೇಳಿದರು.
ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದಶಕಗಳಿಂದ ವಿವಿಧ ತರಹದ ತೆರಿಗೆಳಿಂದ ಜನರು ಹೈರಾಣಾಗಿದ್ದರು. 2017ರಿಂದ ದೇಶಕ್ಕೆಲ್ಲ ಒಂದೇ ತೆರಿಗೆ ಆರಂಭಿಸಲಾಯಿತು. ಭವಿಷ್ಯದ ಕನಸುಗಳನ್ನು ಈಡೇರಿಸಲು ಜಿಎಸ್ಟಿಯಲ್ಲಿ ಸುಧಾರಣೆ ತರಲಾಗಿದೆ. ಹೊಸ ಜಿಎಸ್ಟಿಯಲ್ಲಿ ಕೇವಲ ಶೇ. 5 ಹಾಗೂ ಶೇ. 18 ರಷ್ಟು ತೆರಿಗೆ ವಿಧಿಸಲಾಗಿದೆ ಎಂದರು. ಈ ಮೂಲಕ ಸಮಯ ಬದಲಾದಂತೆ ದೇಶದ ಅಗತ್ಯತೆಯೂ ಬದಲಾಗುತ್ತದೆ ಎಂದು ಹೇಳಿದ್ದಾರೆ.
ಇದು ಹೊಸ ಇತಿಹಾಸ ಸ್ಥಾಪನೆಗೆ ಹೊಸ ಹೆಜ್ಜೆ ಇಡಲಾಗಿದೆ. ಜಿಎಸ್ಟಿ ಇಳಿಕೆ ಭಾರತದ ಅಭಿವೃದ್ಧಿಗೆ ವೇಗ ನೀಡಲಿದೆ. ದೇಶದ ಹಿತಕ್ಕಾಗಿ ಜಿಎಸ್ಟಿಗೆ ಮೊದಲ ಆದ್ಯತೆ ಕೊಟ್ಟಿದ್ದೆವು. ಭವಿಷ್ಯದ ಕನಸುಗಳನ್ನು ಈಡೇರಿಸಲು ಜಿಎಸ್ಟಿಯಲ್ಲಿ ಸುಧಾರಣೆಯಾಗಲಿದೆ. ನಾವು ನಾಗರಿಕ ದೇವೋಭವ ಮಂತ್ರದಿಂದ ಮುನ್ನಡೆಯುತ್ತಿದ್ದೇವೆ. ವಿಕಸಿತ ಭಾರತ ನಿರ್ಮಾಣಕ್ಕೆ ಆತ್ಮ ನಿರ್ಭಾರ ಹಾದಿಯಲ್ಲಿ ಸಾಗಬೇಕು ಎಂದರು.
ಇದನ್ನೂ ಓದಿ: ಮೋದಿಯನ್ನೇ ಕಂಟ್ರೋಲ್ ಮಾಡಬಲ್ಲ ರಿಮೋಟ್ ಯಾವುದು ಗೊತ್ತಾ? ಪ್ರಧಾನಿ ಕೊಟ್ರು ಸ್ಫೋಟಕ ಉತ್ತರ!”
ನಾಳೆ ನವರಾತ್ರಿಯ ಮೊದಲ ದಿನ ಸುರ್ಯೋದಯದೊಂದಿಗೆ ನೆಕ್ಸ್ಟ್ ಜನರೇಷನ್ ಜಿಎಸ್ಟಿ ಪ್ರಾರಂಭವಾಗಲಿದೆ. ಜಿಎಸ್ಟಿ ವಸಂತೋತ್ಸವ ಶುರುವಾಗಲಿದೆ. ಜಿಎಸ್ಟಿ ಕಡಿತದಿಂದ ಎಲ್ಲರಿಗೂ ಪ್ರಯೋಜನವಾಗಲಿದೆ. ಉದ್ಯಮಿಗಳಾಗಲಿ, ಬಡವರಾಗಲಿ ಅಥವಾ ಮಧ್ಯಮ ವರ್ಗದವರಾಗಲಿ, ಎಲ್ಲರೂ ಪ್ರಯೋಜನಪಡೆಯುತ್ತಾರೆ. ಸ್ವದೇಶಿಯ ಮಂತ್ರವು ದೇಶವನ್ನು ಸಬಲೀಕರಣಗೊಳಿಸುತ್ತದೆ. ಅನೇಕ ವಿದೇಶಿ ವಸ್ತುಗಳು ನಮ್ಮ ದೈನಂದಿನ ಜೀವನ ಭಾಗವಾಗಿವೆ. ನಾವು ಅವುಗಳಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳಬೇಕು. ನಾವು ಸ್ಥಳೀಯ, ಭಾರತದಲ್ಲಿ ತಯಾರಿಸಿದ, ನಮ್ಮ ಸ್ವಂತ ಜನರ ಬೆವರಿನಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಬೇಕು ಎಂದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







