ವಿಶ್ವದ 10 ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ tops global popularity
ಹೊಸದಿಲ್ಲಿ, ಜನವರಿ02: ಪ್ರತಿಕೂಲ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುವ ನಾಯಕತ್ವವೇ ನಿಜವಾದ ನಾಯಕ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿಶ್ವ ನಾಯಕರ ಅನುಮೋದನೆ ರೇಟಿಂಗ್‌ಗಳನ್ನು ಪತ್ತೆಹಚ್ಚುವ ಮಾರ್ನಿಂಗ್ ಕನ್ಸಲ್ಟ್ ಎಂಬ ದತ್ತಾಂಶ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ 10 ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು. tops global popularity

ನಿವ್ವಳ ಅನುಮೋದನೆಯನ್ನು ಶೇಕಡಾ 55 ರಷ್ಟು ಪಡೆದಿರುವ ಪ್ರಧಾನಿ ಮೋದಿಯವರ ಜನಪ್ರಿಯತೆಯು ಎಲ್ಲಾ ಜಾಗತಿಕ ನಾಯಕರಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿದೆ.
ಕೊರೋನವೈರಸ್ ಪರಿಸ್ಥಿತಿಯ ಮಧ್ಯೆ ರೇಟಿಂಗ್ ಅಗ್ರಸ್ಥಾನದಲ್ಲಿರುವ ಪ್ರಧಾನಿ ಮೋದಿಯವರು ಏಕೈಕ ಜಾಗತಿಕ ನಾಯಕರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್‌ರವರ ಅಂಕಿ ಅಂಶವು ಶೇಕಡಾ 24 ರಷ್ಟಿದ್ದರೆ, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಇದು ನಕಾರಾತ್ಮಕವಾಗಿದೆ, ಏಕೆಂದರೆ ಅವರ ಕೆಲಸವನ್ನು ಅನುಮೋದಿಸುವವರಿಗಿಂತ ಹೆಚ್ಚಿನ ಜನರು ಅದನ್ನು ನಿರಾಕರಿಸಿದ್ದಾರೆ.
ಹೊಸ ವರ್ಷ 2021 ರ ಜನವರಿ ಎರಡನೇ ವಾರದಿಂದ ಓಡಲಿದೆ 6 ಹೊಸ ರೈಲುಗಳು – ಇಲ್ಲಿದೆ ಅವುಗಳ ವಿವರ
ಮೆಕ್ಸಿಕೋ ಅಧ್ಯಕ್ಷ ಆಯಂಡ್ರೆಸ್ ಮ್ಯಾನ್ಯುಯೆಲ್ ಲೋಪೆಜ್ 29 ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌ಗೆ 27 ಅಂಕಗಳು ಬಂದಿದ್ದು, ಅವರು ಪ್ರಧಾನಿ ಮೋದಿ ನಂತರದ ಸ್ಥಾನ ಪಡೆದುಕೊಂಡಿದ್ದಾರೆ. ಆಸ್ಪ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಬ್ರಿಟನ್, ಅಮೆರಿಕದಲ್ಲಿ ಈ ಸಮೀಕ್ಷೆ ನಡೆದಿತ್ತು.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನಿ ಮೋದಿ ಉತ್ತಮ ಕೆಲಸ ಮಾಡಲು ವಿಫಲರಾಗಿದ್ದಾರೆ ಎಂದು ಹೇಳುತ್ತಿರುವವರಿಗೆ ಈ ಬೆಳವಣಿಗೆ ಆಶ್ಚರ್ಯಕರವಾಗಿದೆ.
ಜನಸಂಖ್ಯೆಯ ಆಧಾರದ ಮೇಲೆ ಕೊರೋನಾ ವೈರಸ್ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದ ನಾಯಕರಾಗಿ ಪ್ರಧಾನಿ ಮೋದಿ ಕರೆಯಿಸಿಕೊಂಡಿದ್ದಾರೆ.

ಜಾಗತಿಕವಾಗಿ ಸಮೀಕ್ಷೆಗಳು ಮತ್ತು ಸಂಶೋಧನೆಗಳನ್ನು ನಡೆಸುವ ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷಾ ಸಂಸ್ಥೆ, 75 ಪ್ರತಿಶತದಷ್ಟು ಜನರು ಮೋದಿಯನ್ನು ಅಂಗೀಕರಿಸಿದ್ದಾರೆ ಮತ್ತು 20 ಪ್ರತಿಶತದಷ್ಟು ಜನರು ಇದನ್ನು ಒಪ್ಪಿಲ್ಲ ಎಂದು ತಿಳಿಸಿದ್ದು, ಅವರ ನಿವ್ವಳ ಅನುಮೋದನೆ ರೇಟಿಂಗ್ 55 ಕ್ಕೆ ತಲುಪಿದೆ ಎಂದು ಹೇಳಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1344696988034498560?s=19
https://twitter.com/SaakshaTv/status/1345050804932132865?s=19








